ಕುಂದಾಪುರ, (ಮೇ, 12): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತ್ರತ್ವದಲ್ಲಿ ಮೇ 12 ರಂದು ಅಂತಿಮ ವರ್ಷದ ಬಿ.ಸಿ.ಎ. ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಾಜಿಸ್ ಕಂಪೆನಿಯ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನೆರವೇರಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಗ್ಲೋಟಚ್ ಟೆಕ್ನಾಲಾಜಿಸ್ನ ಮ್ಯಾನೇಜರ್ (ಟ್ಯಾಲೆಂಟ್ ಎಕ್ವಿಸಿಶನ್) ಶ್ರೀ ಎಬಿನೇಜರ್, ಲೀಡ್ ಟ್ರೆನರ್ ಶ್ವೇತಾ ಭಂಡಾರಿ, ಮಾರ್ವೆಲ್ ರಿಯಾ ರೇಗೋ, ಎನಾಲಿಸ್ಟ್ ಎಕ್ವಿಸಿಶನ್, ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿ ಶ್ರೀ ರಜತ್ ಬಂಗೇರ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ವಿನುತಾ ಎಚ್.ಎಸ್. ಸ್ವಾಗತಿಸಿ, ನಿರೂಪಿಸಿದರು.