ಕುಂದಾಪುರ( ಜ .13): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವಿಟ್ ಲಿಮಿಟೆಡ್ ಕಂಪನಿ ಜನವರಿ 12 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ 20 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಶಾಶ್ವತ್ ತೃತೀಯ ಸ್ಥಾನ ಪಡೆದಿದ್ದಾನೆ.

ಬೈಂದೂರು ಸಮೀಪದ ನಾಗೂರಿನ ಸಂದೀಪನ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾದ ಈತ ಶ್ರೀಮತಿ ವನಿತಾ ಮತ್ತು ಶ್ರೀ ಚಂದ್ರ ಪೂಜಾರಿ ದಂಪತಿಯ ಪುತ್ರ. ಇತನ ಸಾಧನೆಗೆ ಕಂಬದಕೋಣೆಯ ವಿದ್ಯಾಲಕ್ಷ್ಮೀ ಟ್ಯೂಷನ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.












