ಹೆಮ್ಮಾಡಿ (ಮಾ. 18): ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರವಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಿಯ ವಾರ್ಷಿಕ ಬ್ರಹ್ಮರಥೋತ್ಸವ ಏಪ್ರಿಲ್ 12ರಂದು ಜರುಗಲಿದ್ದು, ಆ ನಿಟ್ಟಿನಲ್ಲಿ ರಥೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ರಥೋತ್ಸವದ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆಯುವ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ವೈಭವವಾದ “ಬಗ್ವಾಡಿ ಉತ್ಸವ” ದ ಪೋಸ್ಟರ್ ನ್ನು ಶ್ರೀದೇವರ ಸನ್ನಿಧಿಯಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ರಿ),ಬಗ್ವಾಡಿ ಹೋಬಳಿ ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆಯವರು ಮಾರ್ಚ್, 18 ರಂದು ಅನಾವರಣಗೊಳಿಸಿದರು .


ಮೊಗವೀರ ಮಹಾಜನ ಸೇವಾ ಸಂಘ (ರಿ),ಬಗ್ವಾಡಿ ಹೋಬಳಿ ಮುಂಬೈ ಕುಂದಾಪುರ ಶಾಖೆಯ ಇದರ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ಉಪಾಧ್ಯಕ್ಷರಾದ ಸದಾನಂದ ಬಳ್ಕೂರು, ಜಗದೀಶ್ ಮೊಗವೀರ ಮಾರ್ಕೊಡು,ಕೋಶಾಧಿಕಾರಿಗಳಾದ ಸತೀಶ್ ಎಮ್. ನಾಯ್ಕ್ ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಮಹಿಷಾಸುರಮರ್ದಿನಿ ಸಾಂಸ್ಕೃತಿಕ ಬಳಗದ ಸದಸ್ಯರು ಹಾಗೂ ದೇಗುಲದ ಅರ್ಚಕರು ಉಪಸ್ಥಿತರಿದ್ದರು.


ದಿನಾಂಕ 10.04.2025 ರಿಂದ 14. 04. 2025ರ ವರೆಗೆ ಬ್ರಹ್ಮ ರಥೋತ್ಸವದ ಪ್ರಯುಕ್ತ ಶ್ರೀದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಶ್ರೀ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.












