ಕುಂದಾಪುರ (ಆ.26): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.)ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಮೊಹಮ್ಮದ್ ಸಫಾನ್, ಪ್ರಣೀತ್.ಜಿ, ಆರ್ಯನ್.ಎ ನಾಯ್ಕ್, ಮೊಹಮ್ಮದ್ ನಿಬ್ರಾಜ್, ಮೊಹಮ್ಮದ್ ಅಯ್ಯನ್, ಮೊಹಮ್ಮದ್ ಫಥ, , ಮೊಹಮ್ಮದ್ ಫೈಝಲ್, ಪ್ರಜ್ವಲ್.ಸಿ, ಮೊಹಮ್ಮದ್ ಇಮದ್, ಸಾತ್ವಿಕ್.ಎಸ್.ಎಂ, ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಇಂದದ್, ಕುಂದಾಪುರ ವಲಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಮೊಹಮ್ಮದ್ ಸಫಾನ್, ಪ್ರಣೀತ್.ಜಿ, ಆರ್ಯನ್.ಎ ನಾಯ್ಕ್, ಮೊಹಮ್ಮದ್ ಇಮಾದ್, ಮೊಹಮ್ಮದ್ ನಿಬ್ರಾಜ್, ಮುಹಮ್ಮದ್ ಅಯ್ಯನ್, ಆರ್ಯನ್.ಎ ನಾಯ್ಕ್, ಮೊಹಮ್ಮದ್ ಫಥಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಅಭಿನಂದಿಸಿದರು.











