ಕುಂದಾಪುರ (ಮಾ.19): ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ ಇಲ್ಲಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಮಾರ್ಚ್ 19 ರಂದು ಕೆ.ಪಿ.ಎಸ್. ವಿದ್ಯಾರ್ಥಿಗಳಿಗಾಗಿ ವಿಸ್ತರಣಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು.
ಗಣಕಯಂತ್ರದಲ್ಲಿನ ಇತ್ತೀಚಿಗಿನ ಹೊಸ ಆವಿಷ್ಕಾರಗಳು, ಅವುಗಳ ಬೆಳವಣಿಗೆ, ಅದರ ಉಪಯೋಗ ಮುಂತಾದವುಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕಾಲೇಜಿನ ಬಿ.ಸಿ.ಎ. ವಿಭಾಗದ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಅಲ್ಲಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ, ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶ್ರೀಧರ್ ಭಟ್, ಶಾಲೆಯ ಸಹಶಿಕ್ಷಕರು, ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಗಿರಿರಾಜ್ ಭಟ್, ಶ್ರೀ ಪ್ರಣಾಮ್ ಆರ್., ಶ್ರೀ ಶ್ರೀಕಾಂತ್, ಶ್ರೀಮತಿ ವಿಲ್ಮಾ ಶರಲ್, ಶ್ರೀಮತಿ ವಿಜಯಶ್ರೀ ಉಪಸ್ಥಿತರಿದ್ದರು.