ಕುಂದಾಪುರ (ಸೆ.1): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ಸಿ ಎಸ್ ಎಕ್ಸಿಕ್ಯೂಟಿವ್ ಗ್ರೂಪ್-I
ಮತ್ತು ಸಿ ಎಂ ಎ ಇಂಟರಮೀಡಿಯಟ್ ಗ್ರೂಪ್ -I ಜೂನ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಡಾl ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ.

ಶ್ರೇಯಾ, ಪೂಜಾ ಶೆಟ್ಟಿ, ಆಯುಶ್, ಪೃಥ್ವಿಶ್ ಹೆಬ್ಬಾರ್ ಸಿ.ಎಸ್ ಎಕ್ಸಿಕ್ಯೂಟಿವ್ ಗ್ರೂಪ್-I ರಲ್ಲಿ, ನಿಖಿತಾ ಆರ್ ಪೂಜಾರಿ ಗ್ರೂಪ್ 2 ರಲ್ಲಿ, ಹಾಗೂ ಯಶವಂತ ಸಿ ಎಂ ಎ ಇಂಟರಮೀಡಿಯಟ್ ಗ್ರೂಪ್ -I ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಡಾl ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ ರೀಚ್ ಸಂಸ್ಥೆಯ ಪಠ್ಯ ಪ್ರವಚನ, ಮಧ್ಯಂತರ ಮಾದರಿ ಪರೀಕ್ಷೆ, ಹಾಗೂ ನುರಿತ ತರಬೇತುದಾರರಿಂದ ತರಬೇತಿ, ಸಲಹೆ ಮತ್ತು ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಈ ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.










