ಕುಂದಾಪುರ (ಸೆ.09): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಯೋಜನೆಯಲ್ಲಿ ಸೆಪ್ಟೆಂಬರ್ 09 ಹಾಗೂ 10ರಂದು ನಡೆಯಲಿರುವ “ನೋವೆಷನ್” ಕಾರ್ಪೊರೇಟ್ ಬ್ಯಾಟಲ್ ಮ್ಯಾನೇಜ್ಮೆಂಟ್ ಫೆಸ್ಟ್ ಇಂಟರ್ ಕಂಪನಿ ಸ್ಪರ್ಧೆಯನ್ನು ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಉದ್ಘಾಟಿಸಿದರು.

ಕಾಲೇಜಿನ ಡೀನ್ಸ್ಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀ ಗಿರಿರಾಜ್ ಭಟ್, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ, ಕಾರ್ಯಕ್ರಮ ಸಂಯೋಜಕರಾದ ಶ್ರೀ ರಜತ್ ಬಂಗೇರ, ವಿಭಾಗದ ಪ್ರಾಧ್ಯಾಪಕರುಗಳಾದ ಶ್ರೀ ಪ್ರವೀಣ್ ಮೊಗವೀರ, ಶ್ರೀ ಹರೀಶ್ ಬಿ., ಶ್ರೀಮತಿ ಅವಿತಾ ಕೊರೆಯಾ, ವಿಶಾಲಾಕ್ಷಿ ಎಸ್. ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರುಗಳು ವಿದ್ಯಾರ್ಥಿ ಪ್ರತಿನಿಧಿಗಳಾದ ಕಲ್ಪನಾ ಹಾಗೂ ಕಿಶನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಆಕರ್ಷಕ ಫ್ಲಾಶ್ ಮೊಬ್ ನಡೆಯಿತು. ವಿದ್ಯಾರ್ಥಿಗಳಾದ ಶ್ರೀರಕ್ಷಾ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.










