ಕುಂದಾಪುರ (ಸೆ.27): ಶ್ರೀ ಕೃಷ್ಣನ ತತ್ವಗಳು ಅನನ್ಯವಾದುದು. ರಂಗೋಲಿ ಹಾಕುವಲ್ಲಿ ಕೈ ಬೆರಳ ವಿನ್ಯಾಸಗಳಲ್ಲಿ ಕೃಷ್ಣನ ತತ್ವಗಳು ಅಡಗಿವೆ. ಈ ತತ್ವಗಳನ್ನು ಅರ್ಥೈಸಿಕೊಂಡರೆ ಬದುಕು ಅರ್ಥವತ್ತಾಗುತ್ತದೆ ಎಂದು ವಿದ್ವಾಂಸರಾದ ಉಡುಪಿಯ ಶ್ರೀ ಆಯನೂರು ಮಧುಸೂಧನ ಆಚಾರ್ಯ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗವು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಇನ್ನೋರ್ವ ಮುಖ್ಯ ಅತಿಥಿಗಳಾದ ಬಲಾಡಿ ವಿನಾಯಕ ದೇವಸ್ಥಾನದ ಅರ್ಚಕರಾದ ಶ್ರೀ ವಿನಾಯಕ ಉಡುಪ ಕೃಷ್ಣನ ಭಕ್ತಿಗೀತೆಗಳನ್ನು ಹಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವಾಣಿಶ್ರೀ ಸ್ವಾಗತಿಸಿ, ಶರಣ್ಯ ಅತಿಥಿಗಳನ್ನು ಪರಿಚಯಿಸಿ, ಶಾಲಿನಿ ವಂದಿಸಿ, ಸಾನ್ವಿ ಶೆಟ್ಟಿ ನಿರೂಪಿಸಿದರು. ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ವಿಲ್ಮಾ ಶೆರಲ್ ವಿಜೇತರ ಪಟ್ಟಿ ವಾಚಿಸಿದರು. ದ್ವಿತೀಯ ಬಿ.ಕಾಂ. (ಬಿ) ತಂಡ ಸಮಗ್ರ ಪ್ರಶಸ್ತಿ ಹಾಗೂ ತೃತೀಯ ಬಿ.ಕಾಂ. (ಇ) ಮತ್ತು ದ್ವಿತೀಯ ಬಿಸಿಎ (ಬಿ) ರನ್ನರ್ ಅಪ್ ಪ್ರಶಸ್ತಿ ಪಡೆದರು.











