ಕುಂದಾಪುರ (ಆ ,31): ಮೂಡಬಿದ್ರೆ ಆಳ್ವಾಸ್ ಪಿ ಯು ಕಾಲೇಜಿನ ಕೆ . ಅಮರ್ ನಾಥ ಶೆಟ್ಟಿ ವೇದಿಕೆಯಲ್ಲಿ ಅಕ್ಟೋಬರ್ 26 ರಂದು ನಡೆದ ಐಡಿಯಲ್ ಪ್ಲೇ ಅಬಕಸ್ ಇಂಡಿಯಾ( ಪ್ರೈ) ಲಿಮಿಟೆಡ್ ವತಿಯಿಂದ ನಡೆದ 20ನೇ ರಾಜ್ಯ ಮಟ್ಟದ ಅಬಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ 2025 ಸ್ಪರ್ಧೆಯಲ್ಲಿ ಮಂಕಿ ಶಾಲೆಯ 3ನೇ ತರಗತಿಯ ಆಧ್ಯಾ ವಿ. ಮೊಗವೀರ ಓಪನ್ ಕೇಟಗರಿ ZEL ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರಿಗೆ ಐಡಿಯಲ್ ಪ್ಲೇ ಅಬಕಸ್ ಇಂಡಿಯಾ (ಪ್ರೈ) ಲಿಮಿಟೆಡ್ ಕುಂದಾಪುರ ಸೆಂಟರ್ ಇದರ ಪ್ರಸನ್ನ ಕೆ ಬಿ ತರಬೇತಿ ನೀಡಿರುತ್ತಾರೆ . ಇವರು ಕುಂದಾಪುರ ತಾಲ್ಲೂಕಿನ ನಾಯಕವಾಡಿ ಮಂಕಿಯ ನಿವಾಸಿಯಾಗಿದ್ದು ವಿಜಯ್ ಮೊಗವೀರ ಮತ್ತು ಇಂದಿರಾ ಮೊಗವೀರ ಇವರ ಪುತ್ರಿಯಾಗಿದ್ದು ಪ್ರಸ್ತುತ ಇವರು ನಾಯಕವಾಡಿಯ ಮಂಕಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.











