ಕುಂದಾಪುರ (ಫೆ,05): ಬೆಂಗಳೂರಿನ ಯಲಹಂಕಾದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಯುವ ಕ್ರೀಡಾ ಉತ್ಸವದಲ್ಲಿ ಕುಂದಾಪುರದ ಕೆಡಿಎಫ್ ಕರಾಟೆ ಮತ್ತು ಫಿಟ್ನೆಸ್ ಸೆಂಟರ್ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ಟು 5 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದುಕೊಂಡು ಕರಾಟೆನಲ್ಲಿ ತಮ್ಮ ಉತ್ಕೃಷ್ಟತೆಯನ್ನು ಮೆರೆದಿದ್ದಾರೆ.
ಪದಕ ವಿಜೇತರ ವಿವರ:
ಸೌರವ್ – ಚಿನ್ನದ ಪದಕ (ಬ್ರೌನ್ ಬೆಲ್ಟ್, 48 ಕೆಜಿ ಕುಮೀಟೆ – 21 ವಯೋಮಿತಿ ಒಳಗಿನ ವಿಭಾಗ) ಮೊಹಮ್ಮದ್ ಸಫ್ವಾನ್ ಕೆಬಿ – ಬೆಳ್ಳಿ ಪದಕ (ಬ್ರೌನ್ ಬೆಲ್ಟ್, 42 ಕೆಜಿ ಕುಮೀಟೆ, 17 ವಯೋಮಿತಿ ಒಳಗಿನ ವಿಭಾಗ ) ಅಶ್ಮಿತ್ ಸಿ ಪೂಜಾರಿ – ಚಿನ್ನದ ಪದಕ (ಬ್ಲ್ಯಾಕ್ ಬೆಲ್ಟ್, 44 ಕೆಜಿ ಕುಮೀಟೆ,17 ವಯೋಮಿತಿ ಒಳಗಿನ ವಿಭಾಗ) ಕಾಜಿ ಮೊಹಮ್ಮದ್ ಸಫಾನ್ – ಚಿನ್ನದ ಪದಕ (ಬ್ರೌನ್ ಬೆಲ್ಟ್, 17 ವರ್ಷದೊಳಗಿನವರು, 47 ಕೆಜಿ ಕುಮೀಟೆ,17 ವಯೋಮಿತಿ ಒಳಗಿನ ವಿಭಾಗ) ಸಾನಿಧ್ಯ ಸಂತೋಷ್ ನಾಯಕ್ – ಚಿನ್ನದ ಪದಕ (ಬ್ರೌನ್ ಬೆಲ್ಟ್, ಕಟಾ,17 ವಯೋಮಿತಿ ಒಳಗಿನ ವಿಭಾಗ ಬೆಳ್ಳಿ ಪದಕ (ಬ್ರೌನ್ ಬೆಲ್ಟ್, 40 ಕೆಜಿ ಕುಮೈಟ್,17 ವಯೋಮಿತಿ ಒಳಗಿನ ವಿಭಾಗ)
ಸಂಕಲ್ಪ ಸಂತೋಷ್ ನಾಯಕ್ – ಚಿನ್ನದ ಪದಕ (ಬ್ರೌನ್ ಬೆಲ್ಟ್, 27 ಕೆಜಿ ಕುಮೈಟ್,10 ವಯೋಮಿತಿ ವಿಭಾಗ) ಬೆಳ್ಳಿ ಪದಕ (ಬ್ರೌನ್ ಬೆಲ್ಟ್, 17 ವರ್ಷದೊಳಗಿನವರು, ಕಟಾ)
ತರಬೇತುದಾರರಾದ ಕಿಯೋಶಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿಕೆ, ಮತ್ತು ಸೆನ್ಸಾಯ್ ಶಿಹಾನ್ ಶೇಖ್ ರವರು ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.