ಕುಂದಾಪುರ (ಡಿ.02): ವೃಕ್ಷ ಮಾತೆ ತಿಮ್ಮಕ್ಕ – ಒಂದು ಸಮರ್ಪಣೆ ಎನ್ನುವ ವಿನೂತನ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸ್ವಯಂಸೇವಕರು ತಿಮ್ಮಕ್ಕ ಅವರ ಜೀವನ ಚರಿತ್ರೆಯ ಬಗ್ಗೆ ಪ್ರಹಸನ ಮಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್. ವಿದ್ಯಾರ್ಥಿ ಪ್ರತಿನಿಧಿಗಳಾದ ವಿಕಾಸ್, ಶರಣ್ಯ, ದೀಪಿಕಾ, ಅಭಿಷೇಕ್ ಉಪಸ್ಥಿತರಿದ್ದರು.

ಎನ್.ಎಸ್.ಎಸ್.ನ ಕಾರ್ಯಕ್ರಮಾಧಿಕಾರಿಯಾದ ರಾಜೇಶ್ ಶೆಟ್ಟಿ ವಕ್ವಾಡಿ ಸ್ವಾಗತಿಸಿದರು ಹಾಗೂ ಪೂಜಾ ಕುಂದರ್ ವಂದಿಸಿದರು. ರೋನಿತ್ ಶೆಟ್ಟಿ ಪ್ರಥಮ ಬಿ.ಬಿ.ಎ ಮತ್ತು ವೈಷ್ಣವಿ ಪಥಮ ಬಿ.ಕಾಂ. (ಬಿ) ತಿಮ್ಮಕ್ಕ ಕುರಿತು ಭಾಷಣಗೈದರು. ಆದಿತ್ಯ ದ್ವಿತೀಯ ಬಿ.ಸಿ.ಎ ಪ್ರಾರ್ಥಿಸಿದರು.











