ಉಡುಪಿ (ಫೆ.27): ಖಿದ್ಮಾ ಫೌಂಡೇಶನ್ ಕರ್ನಾಟಕ ಇವರ ಆಶ್ರಯದಲ್ಲಿ ಅಂಬಿಕಾ ತನಯದತ್ತ ನಾಮಾಂಕಿತ ದ.ರಾ. ಬೇಂದ್ರೆಯವರ ಸಾಹಿತ್ಯ ಆಧಾರಿತ ರಾಜ್ಯ ಮಟ್ಟದ ಭಾವ ಗೀತೆ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ಸ್ಪರ್ಧೆಯ ವಿಷಯ: “ಅಂಬಿಕಾತನಯದತ್ತರ ಯಾವುದಾದರೂ ಭಾವ ಗೀತೆ”
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ.
- ಭಾವಗೀತೆ ಯನ್ನು ನಿಮ್ಮ ಸ್ವರದಲ್ಲಿಯೇ ಕಡ್ಡಾಯವಾಗಿ ಹಾಡಿರಬೇಕು.
- ಮುಖ ಕಾಣುವಂತೆ ವಿಡಿಯೋ ಮಾಡಬೇಕು.
- ಯಾವುದೇ ತರಹದ ಹಿನ್ನೆಲೆ ಸಂಗೀತ ಇರಬಾರದು.
- ಭಾವ ಗೀತೆ ಗಾಯನವು ಸ್ವರ, ಲಯ, ತಾಳ ಸಮಯಪಾಲನೆ ಮುಂತಾದವುಗಳು ತೀರ್ಪುನ್ನು ನಿರ್ಧರಿಸುವ ಅಂಶಗಳಾಗಿರುತ್ತವೆ.
*ಗಾಯನದ ವಿಡಿಯೋಗಳನ್ನು 27.02.2021 ಶನಿವಾರ ಬೆಳಿಗ್ಗೆ 10:00 ರಿಂದ 28.02.2021 ಭಾನುವಾರ 8:00 ರ ಒಳಗೆ ಈ ನಂಬರ್ ಗೆ +91 6360580339 ವಾಟ್ಸಪ್ ಮಾಡಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಫಲಿತಾಂಶದೊಂದಿಗೆ ವಿಡಿಯೋಗಳನ್ನು ಬಳಗದಲ್ಲಿ ಹಾಕಲಾಗುವುದು.
- ವಿಡಿಯೋ ಕಳುಹಿಸಿ ಕೊಟ್ಟವರು ನಿಮ್ಮ ಹೆಸರು ಹಾಗೂ ಊರನ್ನು ಇದರಲ್ಲಿರುವ ಬಳಗದಲ್ಲಿ ಕಡ್ಡಾಯವಾಗಿ ಹಾಕಬೇಕಾಗಿ ವಿನಂತಿ.
(ಯಾವುದೇ ಕಾರಣಕ್ಕೂ ಬಳಗದಲ್ಲಿ ವಿಡಿಯೋ ಹಾಕುವ ಹಾಗಿಲ್ಲ ಹಾಗೂ ಫಲಿತಾಂಶಕ್ಕೂ ಮೊದಲು ಬೇರೆ ಕಡೆ ಹರಿದಾಡುವಂತಿಲ್ಲ)
ನಿಮ್ಮ ಬರಹಗಳನ್ನು ಕೊಟ್ಟಿರುವ ಲಿಂಕ್ ಬಳಸಿಕೊಂಡು ಬಳಗದಲ್ಲಿ ಹಾಕಬೇಕಾಗಿ ವಿನಂತಿ.
https://chat.whatsapp.com/BWo7UYy4b8R55yczlqcCdR
*ಸ್ಪರ್ಧಾ ನಿಯಮಗಳು
- ಭಾವಗೀತೆ ಯನ್ನು ನಿಮ್ಮ ಸ್ವರದಲ್ಲಿಯೇ ಕಡ್ಡಾಯವಾಗಿ ಹಾಡಿರಬೇಕು.
ಮುಖ ಕಾಣುವಂತೆ ವಿಡಿಯೋ ಮಾಡಬೇಕು.
ಯಾವುದೇ ತರಹದ ಹಿನ್ನಲೆ ಸಂಗೀತ ಇರಬಾರದು (starmaker ಇತ್ಯಾದಿ) - ಭಾವ ಗೀತೆ ಗಾಯನವು ಸ್ವರ, ಲಯ, ತಾಳ ಸಮಯಪಾಲನೆ ಮುಂತಾದವುಗಳು ತೀರ್ಪುನ್ನು ನಿರ್ಧರಿಸುವ ಅಂಶಗಳಾಗಿರುತ್ತವೆ.*
- ಕೊಟ್ಟ ಅವಧಿಯಲ್ಲಿ ಬಂದ ವಿಡಿಯೊಗಳನ್ನಷ್ಟೇ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಅವಧಿಗೆ ಮೊದಲು ಅಥವಾ ಅವಧಿ ಮೀರಿ ಬಂದ ವಿಡಿಯೋಗಳನ್ನು ಸ್ವೀಕರಿಸುವುದಿಲ್ಲ. ನಿಯಮಪಾಲಿತ ವಿಡಿಯೋಗಳಷ್ಟೇ ಸ್ಪರ್ಧೆಗೆ ಅರ್ಹ.
- ಆಯ್ಕೆಯಾಗುವ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ e-ಪ್ರಶಸ್ತಿ ಪತ್ರವನ್ನು ಹಾಗೂ ಸಮಾಧಾನಕರ ವಿಜೇತರಾದ ಐವರಿಗೆ e- ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಗುವುದು
- ಸ್ಪರ್ಧಾರ್ಥಿಗಳು “ರಾಜ್ಯ ಮಟ್ಟದ ಭಾವ ಗೀತೆ ಗಾಯನ ಸ್ಪರ್ಧೆಗೆ” ಎಂದು ಕಡ್ಡಾಯವಾಗಿ ನಮೂದಿಸಿ ನಿಮ್ಮ ಹೆಸರು, ಊರಿನ ಹೆಸರು, ಮೊಬೈಲ್ ಸಂಖ್ಯೆ, ಕಡ್ಡಾಯವಾಗಿ ಕಳುಹಿಸಬೇಕು.
- ಎಡಿಟ್ ಮಾಡಿದ ವಿಡಿಯೋಗಳನ್ನು ತಿರಸ್ಕರಿಸಲಾಗುವುದು.
- ಕೆಲ ವಿಶೇಷ ಸಂದರ್ಭನುಸಾರವಾಗಿ ನಿಯಮ ಬದಲಾವಣೆ ಮಾಡುವ ಅಧಿಕಾರ ನಿರ್ವಾಹಕರಿಗಿರುತ್ತದೆ ಮತ್ತು ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
- ಸ್ಪರ್ಧೆಯ ಬಗ್ಗೆ ಗೊಂದಲವಿದ್ದಲ್ಲಿ ಆಯೋಜಕರನ್ನು ಸಂಪರ್ಕಿಸಬಹುದು
ಸರ್ವರಿಗೂ ಸುಸ್ವಾಗತ, ಶುಭವಾಗಲಿ
ಖಿದ್ಮಾ ಫೌಂಡೇಶನ್ ಕರ್ನಾಟಕ