ವಂಡ್ಸೆ (ಫೆ.2) ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಗುದ್ದಲಿ ಪೂಜೆ ನೆರವೆರಿಸುವುದರೊಂದಿಗೆ ಕಾಮಗಾರಿಗೆ ಚಾಲನೆ ನೀಡಿದರು.
ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದ್ದು, ಈ ರಸ್ತೆ ಶಾಲಾ ಮಕ್ಕಳು ದಿನನಿತ್ಯ ಓಡಾಡುವ ರಸ್ತೆ ಯಾಗಿದ್ದು, ಶಾಲಾ ಮಕ್ಕಳ ಜೊತೆಗೆ ಈ ಭಾಗದ ಅನೇಕ ಜನರಿಗೆ ಬಹಳಷ್ಟು ಅನುಕೂಲಕರ ಆಗಲಿದೆ ಎಂದು ಅವರು ಹೇಳಿದರು.
ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಮುದ್ದಯ್ಯ ಪೂಜಾರಿ, ರಾಘವೇಂದ್ರ ಕೊಠಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.