ಗಂಗೊಳ್ಳಿ (ಮಾ.8): ಗಂಗೊಳ್ಳಿಯಲ್ಲಿ ಕಳೆದ 75 ವರ್ಷಗಳಿಂದ ಧರ್ಮ ಜಾಗ್ರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುತ್ತಿರುವ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನ ಕುಂದಾಪುರ ಪರಿಸರದ ಪ್ರಮುಖ ಭಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಸರಕಾರದ ಹಾಗೂಇತರ ಅನುದಾನವನ್ನು ಬಳಸಿಕೊಂಡು ವ್ಯವಸ್ಥಿತವಾದ ಸಭಾಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಬೈಂದೂರಿನ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಮಾರ್ಚ್ 7 ರ ರವಿವಾರ ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಇದರ ಅಮೃತಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗೊಳ್ಳಿಯ ಉದ್ಯಮಿ ಎಚ್. ಗಣೇಶ ಕಾಮತ್ ನೂತನ ಸಭಾಭವನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮಂಡಲ ಪ್ರಧಾನ ಜಿ. ಸದಾನಂದ ಶೆಣೈ, ಸಭಾಭವನ ನಿರ್ಮಾಣಕ್ಕೆ ಜಾಗವನ್ನು ನೀಡಿದ ಉದ್ಯಮಿ ಎಚ್. ಗಣೇಶ ಕಾಮತ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಜಿ.ಟಿ. ಯವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಮತ್ಯೋದ್ಯಮಿ ಮಂಜುನಾಥ ಜಿ.ಟಿ. ಮುಖ್ಯೋಪಾಧ್ಯಾಯ ಮುಡೂರ, ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಪೈ, ಗಣೇಶ ಶೆಣೈ, ದೇವು ಶಿಪೈ, ಲಕ್ಷ್ಮೀಕಾಂತ ಮಡಿವಾಳ, ಭಜನ ತರಬೇತುದಾರ ಜಗದೀಶ ನಾಯಕವಾಡಿ, ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ. ಶ್ರೀ ಇಂದುಧರ ಯುವಕ ಮಂಡಲದ ಗೌರವಾಧ್ಯಕ್ಷ ಗುರುರಾಜ್ ಬಿ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಂದುಧರ ದೇವಸ್ಥಾನದ ಅಧ್ಯಕ್ಷ ಸುಂದರ ಬಿ. ಸ್ವಾಗತಿಸಿ, ನಿರ್ವಹಿಸಿದರು, ಕಾರ್ಯದರ್ಶಿ ಶ್ರೀನಿವಾಸ ಬಿ. ವಂದಿಸಿದರು.