ಕುಂದಾಪುರ (ಮಾ. 31): ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿ.ಎ., ಸಿ.ಎಸ್. ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ರೋಶನಿ ನಿಕೋಲಾ ಅವರು ಅಖಿಲ ಭಾರತ ಮಟ್ಟದ ಸಿ.ಎ. ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ಮತ್ತು ಸುಪ್ರಭ ಅವರು ಭಾರತ ಮಟ್ಟದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಪ್ರತಿ ವರ್ಷದಂತೆ ನವೆಂಬರ್ ನಲ್ಲಿ ನಡೆಸಿದ ಸಿ.ಎ. ಫೌಂಡೇಶನ್ ಮತ್ತು ಸಿ.ಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ಕೋವಿಡ್ ಕಾರಣದಿಂದ ತಮ್ಮ ಪರೀಕ್ಷೆಯನ್ನು ಜನವರಿಗೆ ಆಪ್ಟ್ ಔಟ್ ಮಾಡಿಕೊಂಡಿರುವ ರೋಶನಿ ಸಿ.ಎ. ಇಂಟರ್ ಮಿಡಿಯೇಟ್ ಗ್ರೂಪ್ 2 ಪರೀಕ್ಷೆಯಲ್ಲಿ 234 ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ. ಇಂಟರ್ ಮಿಡಿಯೇಟ್ ಎರಡು ಗ್ರೂಪ್ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ರೋಶನಿ ನಿಕೋಲಾ ಅವರು ಫೈನಾನ್ಸಿಯಲ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ 80 ಅಂಕ ಮತ್ತು ಅಡ್ವಾನ್ಸ್ ಅಕೌಂಟಿಂಗ್ ನಲ್ಲಿ 69 ಅಂಕ ಪಡೆದು ಎರಡು ವಿಷಯದಲ್ಲಿ ಎಕ್ಸಾಮ್ಷನ್ ಪಡೆದಿರುತ್ತಾರೆ.
ಸುಪ್ರಭಾ ರೋಶನಿ ನಿಕೋಲಾ
ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಸುಪ್ರಭಾ 258 ಅಂಕ ಗಳಿಸುವುದರ ಜೊತೆಗೆ ಬಿಸಿನೆಸ್ ಎಕನಾಮಿಕ್ಸ್ ನಲ್ಲಿ ಸಂಸ್ಥೆಯಲ್ಲಿ ಅತ್ಯಧಿಕ 85 ಅಂಕ ಮತ್ತು ಅಕೌಂಟ್ಸ್ ವಿಷಯದಲ್ಲಿ 71 ಅಂಕ ಪಡೆಯುವುದರ ಮೂಲಕ ಎರಡು ವಿಷಯದಲ್ಲಿ ಎಕ್ಸಾಮ್ಷನ್ ಪಡೆಯುವುದರ ಮೂಲಕ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಮುಖ್ಯಸ್ಥರು ಸಂತೋಷವನ್ನು ವ್ಯಕ್ತಪಡಿಸುತ್ತಾ ಶಿಕ್ಷ ಪ್ರಭಾ ಅಕಾಡೆಮಿ ಗುಣಮಟ್ಟದ ಯಾವುದೇ ರಾಜಿ ಮಾಡಿಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯ ನೀಡಲು ಉತ್ಸುಕವಾಗಿದೆ ಎಂದರು.ಸಾಧಕ ವಿದ್ಯಾರ್ಥಿಗಳು ಮಾತನಾಡುತ್ತಾ ನಮ್ಮ ಸಾಧನೆಗೆ ಸಹಕರಿಸಿದ ಶಿಕ್ಷ ಪ್ರಭಾ ಅಕಾಡೆಮಿಯ ಎಲ್ಲ ಬೋಧಕ ಸಿಬ್ಬಂದಿಗಳಿಗೂ ನಮ್ಮ ಬೆನ್ನೆಲುಬಾಗಿ ನಿಂತ ಪೋಷಕರಿಗೂ ಧನ್ಯವಾದ ಅರ್ಪಿಸಿದರು.












