ಮಂಗಳೂರು (ಏ, 6): ವೇತನ ಹೆಚ್ಚಳ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಇಲಾಖೆಯ ನೌಕರರು ಎಪ್ರಿಲ್ 7 ರಂದು ಕರೆ ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಎಪ್ರಿಲ್ 7 ರ ಬುಧವಾರ ನಡೆಯಬೇಕಿದ್ದ ಮಂಗಳೂರು ವಿ.ವಿ. ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಮಂಗಳೂರು ವಿ.ವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ ಪಿ.ಎಲ್ ಧರ್ಮ ರವರು ತಿಳಿಸಿರುತ್ತಾರೆ.
ಹಾಗೆಯೇ ಎಪ್ರಿಲ್ 7 ರಂದು ನಡೆಯ ಬೇಕಿದ್ದ ಪರೀಕ್ಷೆಯ ಮುಂದೂಡಲ್ಪಟ್ಟ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು.