ಕಳೆದ ಅಕ್ಟೋಬರ್ 10, 2020 ರಿಂದ ಆರಂಭಗೊಂಡು ಜನವರಿ 15, 2021ರ ವರೆಗೂ ನಡೆದ ಇಂಡಿಯನ್ ಏರ್ ಫೋರ್ಸ್ ನ ಔದ್ಯೋಗಿಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಡೆದ ಎರಡು ಹಂತದಲ್ಲಿನ ( Phase 1: Physical, Written. Phase 2; GD, Psychological and Medical Test) ವಿವಿಧ ಪರೀಕ್ಷೆಗಳಲ್ಲಿ ಸಫಲರಾಗಿ ಇಂಡಿಯನ್ ಏರ್ ಫೋರ್ಸ್ ನ ಏರ್ ಮನ್ (ಟೆಕ್ನಿಕಲ್) ಹುದ್ದೆಗೆ ಆಯ್ಕೆಯಾಗಿ, ಪ್ರಸ್ತುತ ಬೆಳಗಾಂನಲ್ಲಿ ತರಬೇತಿಯಲ್ಲಿರುವ ಶಿಶಿರನ ಸಾಧನೆ ನಿಜಕ್ಕೂ ಶಿಖರ ಪ್ರಾಯ ವಾದುದು.
ಕೋಟ ಸಮೀಪದ ಕದ್ರಿಕಟ್ಟಿನಲ್ಲಿನ ಶ್ರೀಯುತ ಶಂಕರ್ ಸುವರ್ಣ ಮತ್ತು ಶ್ರೀಮತಿ ಲಲಿತಾ ಸುವರ್ಣರದ್ದು ಚಿಕ್ಕ ಕುಟುಂಬ. ಮಗನಾದ ಶಿಶಿರ್ ಶ್ರಮಜೀವಿ. ಭಂಡಾರ್ಕಸ್ ಕಾಲೇಜಿನಲ್ಲಿ ಅಂತಿಮ B.Sc. ವಿದ್ಯಾರ್ಥಿಯಾಗಿದ್ದ. ಆಸೆಗಳನ್ನು ಅದುಮಿಟ್ಟು ಕುಟುಂಬ ನಿರ್ವಹಣೆಯಲ್ಲಿ ಆದಷ್ಟು ಹೆಗಲು ಕೊಟ್ಟವ. ಅಮ್ಮನೆಂದರೆ ಸ್ವಲ್ಪ ಜಾಸ್ತಿನೇ ಭಯ-ಭಕ್ತಿ. ಇದೀಗ ಮತ್ತೊಬ್ಬ ತಾಯಿಯ ಸೇವೆಗೆ ನಿರತನಾಗಿದ್ದಾನೆ .
ತನ್ನ ಹೈಸ್ಕೂಲ್ ಶಿಕ್ಷಣದಲ್ಲೇ (ವಿವೇಕ ಹೈಸ್ಕೂಲ್) NCC ಯತ್ತ ಒಲವು ಹೊಂದಿದ್ದವ ಜೂನಿಯರ್ ಕೆಡೆಟ್ (JD) ಆಗಿ ಗುರುತಿಸಿಕೊಂಡಿದ್ದ. ನಂತರದಲ್ಲಿ ಪದವಿ ವ್ಯಾಸಂಗದೊಂದಿಗೆ NCC ನಲ್ಲಿ senior cadet(SD) ಆಗಿದ್ದು, ಸಂಬಂಧಿತ RDC ಮತ್ತು AAC (Army Attachment Camp, (PRTC Bangalore ) ಕ್ಯಾಂಪ್ ಗಳಲ್ಲಿ ಭಾಗವಹಿಸಿ, ನಡೆದ NCC B ಸರ್ಟಿಫಿಕೇಟ್ ಎಗ್ಸಾಂ ನಲ್ಲಿ A grade ಪಡೆದಿದ್ದ. NCC ಯ ಕೊನೆಯ ಹಂತದ ಎಗ್ಸಾಂ ‘C’ certificate ಗಾಗಿ CATC ಕ್ಯಾಂಪ್ ನಲ್ಲಿ ಭಾಗಿಯಾಗಿದ್ದರೂ ಕೂಡಾ ಅದರ ಮುಂಚಿತವಾಗಿಯೇ Indian Air Force ಗೆ ಆಯ್ಕೆ ಆಗಿದ್ದಾನೆ. NCC achievement ಆಧಾರದಲ್ಲಿ ಕೊಡಲ್ಪಡುವ rank ನಲ್ಲಿ CSM ( Company Sergeant Major) ಆಗಿ ಅಭಿನಂದಿಸಲ್ಪಟ್ಟ ಶಿಶಿರ್ ಭಾರತೀಯ ಸೇನೆಯತ್ತ ಮಹತ್ತರ ಆಕಾಂಕ್ಷೆ ಹೊಂದಿದ್ದಾನೆ.
ದೇಹ ತೂಕ ಅಗತ್ಯಕ್ಕಿಂತ ಹೆಚ್ಚೇ ಇತ್ತು, ಸುಮಾರು 78 ಕೆಜಿಯಷ್ಟು. ಆಯ್ಕೆ ಪ್ರಕ್ರಿಯೆಯ ಎರಡನೇ ಹಂತದ ಕೊನೆಯಲ್ಲಿದ್ದ ಮೆಡಿಕಲ್ ಟೆಸ್ಟ್ ನಲ್ಲಿ ನಿಗದಿಯಾಗಿದದ್ದು 72 ಕೆಜಿ. ಸಮಯಾವಕಾಶ ಇದ್ದದ್ದು ತುಂಬಾ ಕಡಿಮೆ; ತಿಂಗಳಷ್ಟು. ಕಾಲಿಗೆ ಶೂ ಕಟ್ಟಿ ಬೆವರಿಳಿಸಿದ್ದ. ಕೇವಲ ಚಪಾತಿ, ನೀರಿನಲ್ಲೇ ಊಟ ಮುಗಿಸಿದ್ದ. ಅದಾಗಲೇ ದೇಹ ಮನಸ್ಸಿನ ಹಿಡಿತದಲ್ಲಿತ್ತು.
ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಲೋಕದಲ್ಲಿ ಚಿರಪರಿಚಿತ ನೆಲ ನಮ್ಮೀ ಕೋಟ .ಅದಷ್ಟೇ ಅಲ್ಲದೇ ದೇಶ, ದೇಶ ಸೇವೆ ಅಂತ ಬಂದಾಗ ಹೆಮ್ಮೆ ಅನಿಸುವುದು ಗಡಿಯಂಚಿನ ಕೆಚ್ಚೆದೆಯ ಊರಿನ ಅನೇಕ ಯೋಧರಿಂದಾಗಿ. ಮುಕುಟಕ್ಕೆ ಮತ್ತೊಂದು ಗರಿ; ಶಿಶಿರ್… ರಿಯಲ್ ಹೀರೋ..
ತಾಯಿ ಭಾರತಿಯ ಸೇವೆಯಲ್ಲಿರುವ ನಿನಗೆ ಹಾಗೂ ಹೆತ್ತವರಿಗೂ ಅಮ್ಮ ಅಮೃತೇಶ್ವರಿಯು ಆಯುರ್ ಆರೋಗ್ಯ, ಯಶಸ್ಸನ್ನಿತ್ತು, ಮನದಿಷ್ಟ ಪೂರೈಸಲಿ..
ಹರೀಶ್ ಕಾಂಚನ್, ಮುದ್ದುರಾಧ