ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
Tag: harish kanchan
ಹೇಳದೆ ಹೋದ ಅಪ್ಪನಿಗಾಗಿ…
ಅಂದು ಶಿವರಾತ್ರಿಯ ಅಮಾವಾಸ್ಯೆ, ಸಂಜೆ ಹೊತ್ತು ನನ್ನ ಬಾಲ್ಯದ ಸ್ನೇಹಿತರ ಜೊತೆ ಆಟ ಮುಗಿಸಿ ಮನೆಗೆ ಹೋಗುವಾಗ, ಗೆಳೆಯ ಅಶೋಕ್ ಹೇಳಿದ “ಇವತ್ತು ಕೋಟೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಇದೆ, ನನ್ನ ಬಳಿ ಹಣ ಇದೆ, ಈವಾಗಲೇ ಹೋಗಿ ಅಲ್ಲೇ ಏನಾದ್ರೂ ತಿಂದು ಯಕ್ಷಗಾನ ನೋಡಿಕೊಂಡು ಬರೋಣ” ಎಂದು ಹೇಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅವನೊಂದಿಗೆ ಯಕ್ಷಗಾನ ನೋಡಲು ಹೋಗಿದ್ದೆ. ಇತ್ತ ಊಟ ಸಿದ್ದಪಡಿಸಿಕೊಂಡು ಕಾದಿದ್ದ ಅಮ್ಮನಿಗೆ ಚಿಂತೆ ಹೆಚ್ಚಾಗಿ ಅಪ್ಪನಿಗೆ […]
ದಡವಿಲ್ಲದ ದೋಣಿಗಳು
ಇನ್ನೂ ಅರ್ಧಗಂಟೆ ಅಂದಿದ್ದರೆ ಆದಷ್ಟು ದೋಣಿಗಳು ಹೇಳಹೆಸರಿಲ್ಲದಂತೆ ಸಮುದ್ರದ ಒಡಲು ಸೇರುತ್ತಿದ್ದವು. “ತೀರ” ಅನ್ನುವಂತಿದ್ದ ಕಡಲ ದಂಡೆ ರಕ್ಕಸ ಅಲೆಗಳಿಗೆ ರಕ್ಷಣೆಯಿಲ್ಲದೆ ತಾವಾಗೇ ಸೋಲನ್ನಪ್ಪಿದ್ದವು. ಕೊರೆತಕ್ಕೆ ಸವೆಯುತ್ತಿದ್ದ ಮರಳನ್ನು ಹಿಡಿದಿಡಲಾಗದೆ ಕರಾವಳಿಗುಂಟ ಮರಗಿಡಗಳು ನೀರುಪಾಲಾದವು. ಕೋಟಾದ ಮಣೂರು ಪಡುಕರೆಯಲ್ಲಿ ಕಂಡುಬಂದ ದೃಶ್ಯಗಳಿವು. ಕರಾವಳಿಯುದ್ದಕ್ಕೂ ಇಂದು ಇದೇ ಗೋಳು. ಹರೀಶ್ ಕಾಂಚನ್, ಮುದ್ದುರಾಧ
ಮರಣ ಬಲೆ
ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ “ಮರಣ ಬಲೆ” ಕೂಡಾ ಒಂದು. ಹೆಸರೇ ಅರ್ಥೈಸುವಂತೆ ಅಜಾಗರೂಕತೆ, ಮರಣ-ಮಸಣಕ್ಕೊಯ್ಯುವಂತದ್ದು. ಅಲೆಗಳಬ್ಬರ ಹೆಚ್ಚಿದ್ದಾಗ ಮಾತ್ರ ಬಲೆ ನೀರಿನಾಳಕ್ಕೆ ಇಳಿಯುತ್ತದೆ. ಬಲೆ ಹೊತ್ತು ಅಲೆ ದಾಟಿ ಕೈ ಸಡಿಲಿಸುವಲ್ಲಿ ಮೀನುಗಾರ ನಿಪುಣನಾಗಿರಲೇ ಬೇಕು. ಹೆಚ್ಚಾಗಿ ಆಳ ಸಮುದ್ರದ ಮೀನುಗಾರಿಕೆಗೆ ಮಳೆಗಾಲದ ರಜೆಯಿತ್ತಾಗ ಈ ‘ಮರಣಬಲೆ’ ಯನ್ನು ಅಣಿಗೊಳಿಸಲಾಗುತ್ತದೆ. ಮುಳ್ಳು ಬಿಡಿಸ ಬಲ್ಲವಗೆ ಯಾವ ಮೀನಾದರೇನು? ಅಲೆಗೆ ಎದೆಯೊಡ್ಡುವವಗೆ ಯಾವ ಬಲೆಯಾದರೇನು? ವೀರ ಕಳೆ ಮೊಗದಲ್ಲಿದ್ದರಷ್ಟೇ ಸಾಕು… ಅದೋ […]
ಶಿಶಿರ್ ಸುವರ್ಣ : ಶಿಖರದಷ್ಟೇ ಅಚಲ – ಸುವರ್ಣದಷ್ಟೇ ಮೆರುಗಿನಂತಹ ಪ್ರಖರ ವ್ಯಕ್ತಿತ್ವ
ಕಳೆದ ಅಕ್ಟೋಬರ್ 10, 2020 ರಿಂದ ಆರಂಭಗೊಂಡು ಜನವರಿ 15, 2021ರ ವರೆಗೂ ನಡೆದ ಇಂಡಿಯನ್ ಏರ್ ಫೋರ್ಸ್ ನ ಔದ್ಯೋಗಿಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಡೆದ ಎರಡು ಹಂತದಲ್ಲಿನ ( Phase 1: Physical, Written. Phase 2; GD, Psychological and Medical Test) ವಿವಿಧ ಪರೀಕ್ಷೆಗಳಲ್ಲಿ ಸಫಲರಾಗಿ ಇಂಡಿಯನ್ ಏರ್ ಫೋರ್ಸ್ ನ ಏರ್ ಮನ್ (ಟೆಕ್ನಿಕಲ್) ಹುದ್ದೆಗೆ ಆಯ್ಕೆಯಾಗಿ, ಪ್ರಸ್ತುತ ಬೆಳಗಾಂನಲ್ಲಿ ತರಬೇತಿಯಲ್ಲಿರುವ ಶಿಶಿರನ […]
ಸೋಂಕಿತರು… ನೀವಂದುಕೊಂಡಷ್ಟೇ ಬದುಕಲ್ಲ
ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಮಗ, ಸೋಂಕಿಗೆ ಭಯಗೊಂಡು, ಇಂದು ಊರ ದಾರಿ ಹಿಡಿದಿದ್ದ.. ದೂರದಲ್ಲೆ ಕಂಡ ಚಿಂಟು, ಗುರುತು ಹಚ್ಚಿ ಕುಂಯ್ ಗುಡುತ್ತಾ ಓಡಿ ಬಂದು ಕಾಲು ನೇವರಿಸುತಿತ್ತು.. ಅದು ಸುಮಾರು ಆರು ವರ್ಷದ ಹಿಂದಿನ ಮಾತು, ಚಿಂಟುವಿಗಾಗ ನಾಲ್ಕೇ ತಿಂಗಳು.. ಅದರ ನೆನಪಲ್ಲಿ ಇವನ ಮುಖ ಮಾಸಿರಲಿಲ್ಲ.. ಬಾಲ ಅಲ್ಲಾಡಿಸುತಿತ್ತು…. ಚಿಂಟು ಓಡಿದ್ದನ್ನು ಕಂಡು, ಅದಾಗಲೇ ಒಲೆ ಪಕ್ಕ ಇಟ್ಟ ಬಟ್ಟಲಿಗೆ ಒಂದಷ್ಟು ನೀರು ಸುರಿದು, ಅರಸಿನ […]
ಜಟ್ಟಿದೇವಸ್ಥಾನ್ ಹಬ್ಬ….. ಒಂದು ನೆನಪು..
ಪೊಡಾಯಿನ್ ಜೋರ್ ಗಾಳಿಗೆ, ಕಡ್ಲಿನ್ ಆ ತೆರಿಗಳ್ ಸುಂಯ್ ಗುಟ್ಟು ಶಬ್ದು ಕೆಳ್ಕಂಡ್, ಅಜ್ಜಿ ಹೇಳು ಕಥಿಗೆ ಮಲ್ಕಂತಿದ್ದರ್ ನಾವ್. ಅವತ್ತ್ ಜನವರಿ ಆರ್ನೆ ದಿನದ್ ಹೊತ್ತ್ ಕಂತಿ ಹೊಯ್ ಇದ್ದಿತ್. ಏಳುವರೆ ಏಂಟ್ ಆಯ್ತ್ ಅಂದ್ರ ಸಾಕ್ ಊರಿಗ್ ಊರೆ ಉಂಡ್ಕ ಮನಿಕಂತ್ ಇದ್ದಿತ್. ಆ ನೂರ್ ವೋಲ್ಟಿನ್ ಬಲ್ಪ ಸುಚ್ಚ್ ಬಂದ್ ಮಾಡಿ ಅಜ್ಜಿ ಹಾಂಗೆ ಎಲಿ ಅಡ್ಕಿ ತಿಂತ ಹಸಿ ಬುಡ್ದಂಗ್ ಗೋಡಿ ಒರ್ಗಿ ಕುಕಂಡಳ್.ಕಾಲ್ […]
ನನ್ನ ಶಾಲೆ…. ಒಂದಷ್ಟು ನೆನಪುಗಳು..
“ಹರಿಯಾ….. ಎಂಥ ಇವತ್ ಶಾಲಿಗ್ ಹೊಪು ಅಂದಾಜ್ ಇಲ್ದಾ?”.” ಅಬಾ.. ಒಂದೇ ಬೀಡ್ ಬಲಿ; ಇಲ್ಲೇ ನೈಕ್ರ್ ಮನಿ ಸರ್ತ ಬಿಟ್ಟಿರ್, ಶಾಲಿಗ್ ಗಂಟಿ ಆಪುರ್ ಒಳ್ಗೆ ಬತ್ತೆ”… ಜೈ ಭಾರತ ಜನನಿಯ ತನುಜಾತೆ; ಜಯ ಹೇ ಕರ್ನಾಟಕ……“ಗಡಾ ರಾಜು ಮಾಷ್ಟ್ರ್ ಇನ್ನೂ ಬರ್ಲಾ, ಮೂರ್ನೆ ಪಿರೆಡ್ ಪಿ.ಟಿ ಕೆಂಬುಕ್ ಹೋಪುಕ್ ಹೇಳ್ ಲೀಡರ್ ಹತ್ರ”….” ರಾಜು ಮಾಷ್ಟ್ರ್ನ್ ಆಗ್ಲೇ ಆಫೀಸ್ ರೂಮಂಗ್ ಕಂಡಂಗ್ ಆಯ್ತ್”…“ಅದ್ ಬಿಳಿ ರಾಜು ಮಾಷ್ಟ್ರ್, […]