ಉಡುಪಿ (ಏ, 29): ಏ. 21ರಂದು ನಾಪತ್ತೆಯಾಗಿದ್ದ ಬಡಗುತಿಟ್ಟಿನ ಹೆಸರಾಂತ ಪೆರ್ಡೂರು ಮೇಳದ ಕಲಾವಿದ ಉದಯ ಹೆಗಡೆ ಕಡಬಾಳ ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಉದಯ ಹೆಗಡೆ ಅವರು ಯಕ್ಷಗಾನ ಕಲಾವಿದೆ ಹಾಗೂ ಯಕ್ಷ ಶಿಕ್ಷಕಿಯಾಗಿರುವ ಅಶ್ವಿನಿ ಹೆಗಡೆ ಯವರ ಪತಿ. ಏಪ್ರಿಲ್ 21 ರಂದು ಸಂಜೆ ನಾಪತ್ತೆಯಾದ ಹಿನ್ನಲೆಯಲ್ಲಿ ಪತ್ನಿ ಅಶ್ವಿನಿ ಕೋಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಉದಯ ಹೆಗಡೆ ಕಡಬಾಳರನ್ನು ಬೆಂಗಳೂರಿನ ಸಂಬಂಧಿಯ ಮನೆಯಲ್ಲಿ ವಾಸವಿರುವುದು ಪತ್ತೆ ಹಚ್ಚಿದ್ದಾರೆ.












