ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕುಂದಗನ್ನಡವು ಒಂದಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಜನರು ಅತಿವೇಗದಲ್ಲಿ ಹಾಗೂ ಚುಟುಕಾಗಿ ಪದಗಳನ್ನು ಪೋಣಿಸಿ ಮಾತನಾಡುವ ಭಾಷೆ ಈ ಕುಂದಗನ್ನಡ.
ಪ್ರಾದೇಶಿಕತೆಯ ವೈಶಿಷ್ಟತೆಯನ್ನು ಒಳಗೊಂಡಿರುವ ಈ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವುದೇ ಚೆಂದ. ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ಪದಗಳನ್ನು ಸೇರಿಸಿ ಮಾತನಾಡುವ ಈ ಭಾಷೆ ಅನ್ಯರಿಗೆ ಸ್ವಲ್ಪ ವೈಶಿಷ್ಟಪೂರ್ಣ ಹಾಗೂ ವಿಭಿನ್ನವಾಗಿ ಕಂಡುಬರುವುದು ಸಹಜ. ಹಾಗೆಯೇ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವಾಗ ಈ ಭಾಗದ ಜನತೆ ಅನ್ಯಭಾಷೆಯ ಪದಗಳನ್ನು ಸೇರಿಸಿ ಮಾತನಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಇಂಗ್ಲೀಷ್ ಭಾಷೆಯ ವಿವಿಧ ಪದಗಳನ್ನು ಕುಂದಗನ್ನಡದಲ್ಲಿ ಬಹಳ ಹಿಂದಿನಿಂದಲೂ ಸ್ವಾಭಾವಿಕವಾಗಿ ಬಳಕೆ ಮಾಡಲಾಗುತ್ತಿದೆ. ಅಂತಹ ಪದಗಳು ತುಂಬಾ ವಿಭಿನ್ನವಾಗಿ ಕುಂದಗನ್ನಡದಲ್ಲಿ ಹಾಸುಹೊಕ್ಕಾಗಿದೆ.
ಇಂಗ್ಲಿಷ್ ನಿಂದ ಕುಂದಗನ್ನಡಕ್ಕೆ ರೂಪಾಂತರಗೊಂಡಿರುವ ಕೆಲವು ವೈಶಿಷ್ಟಪೂರ್ಣ ಪದಗಳನ್ನು ಸಂಗ್ರಹಿಸಿ ನಿಮ್ಮ ಮುಂದಿಟ್ಟಿದ್ದೆವೆ.
ಒಮ್ಮೆ ಓದಿ…
.ಏಗ್ನೇಸ್ಟ್ – Against
. ಹಂಬಕ್ – Humbug
.ಬ್ಯಾಸ್ಲೆಟ್ – Bracelet
.ಬಿಡ್ಲಿಂಗ್ – Building
.ಜಿನ್ ಸೀಟ್ -Zink Sheet
.ಕೂಟ್ರ- Scooter
.ಪಿಟ್ರೋಲ್ – Foot rule
.ರೇಡಿ – Radio
.ರ್ವಾಲಿ- Lorry
.ಬಲ್ಪ – Bulb
.ಬಾಟ್ಲಿ -Bottle
.ಪೌಂಡರ್ -Powder
.ಕಂತ್ರಟ್- Contract
.ರಿಸ್ರ್ತೀ -Register
.ಪ್ರೇಮಸ್- Famous
.ಸ್ಲ್ಯಾಪ್ -Slab
ವೈಪ್ರೇಶನ್ – Vibration
.ಬ್ಯಾಶನ್- Basin
.ಬಾಯಿ ಪಾಠ- By heart
.ಜುಪ್- Zip
.ಟ್ಯಾಂಕಿ- Tank
.ಸಿಸರಿಂಗ್- Caesarian
.ರಿಜಲ್ಟ್- Result
.ಲಿವರ್ಸ್-Reverse
.ಕ್ಯಾನಿಂಗ್- Scanning
.ಡಿಜೇನ್- Design
.ಲಿಪ್ಟಿಕ್- Lipstick
.ಬೀರ್- Beer
.ಬಿಡ್ಜ್ -Bridge
.ಪೆಸಲ್ -Special
.ಬೋಲ್ಡ್- Board
.ಡ್ಯೂಬ್ಲಿಕೇಟ್- Duplicate
.ಎಲಿಮಿನ್ -Aluminium
.ಗುಲ್ಕೋಸ್ -Glucose
.ಇಂಗೇಶನ್ -Injection
.ಹೈಬ್ರೋ -Eye brow
.ಸ್ಟೂರ್ -Tour
.ತಾಮಟಿ- Tomato
.ಡ್ವಾಂಟ್ ಕೇರ್ -Don’t Care
.ಪ್ರೇಜ್ -Prize
.ಪಟ-Photo
.ಹಂಪೆರ್ -Umpire
.ಜೆಸಿಪಿ-JCB
.ಕ್ಲಾಸ್ ಮೆಂಟ್ -Classmate
.ಎಕ್ಸೋಬ್ಲೇಡ್ -Hexa blade
.ಮೆಜಾಮೆಂಟ್ -Management
.ಡ್ಯಾಂಗ್ಸ್-Dance
.ಬಿಸ್ಕೂಟ್-Biscuit
.ಗ್ಯಾರೇಜ್- Garage
ಪೆಸಲಿಸ್ಟ್ -Specialist
.ಕಿರಿಮ್- Cream
.ಪಾಕಿಟ್- Pocket
.ಕುಲೋಜ್ -Close
.ಹೆಲ್ಮೆಂಟ್ -Helmet
.ಪೂರ್ವ ಪಟ- Power of attorney
.ತಿಪ್ಪಿನ್ ಕೇರಿ- Tiffin Carrier
ಸಂಗ್ರಹ – ಪ್ರವೀಣ್ ಗಂಗೊಳ್ಳಿ