ಕುಂದಾಪುರ (ಸೆ,7): ಮಂಗಳೂರು ವಿ.ವಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಕುಂದಾಪುರದ ಡಾ|ಬಿ .ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿ ದಿವ್ಯಾರವರು ಟಾಟಾ ಸ್ಟೀಲ್ ಏಷಿಯನ್ ಜೂನಿಯರ್ ಗರ್ಲ್ಸ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜಾರ್ಖಂಡ್ ರಾಜ್ಯದ ಜೇಮ್ ಶೆಡ್ ಪುರದಲ್ಲಿ ಸೆಪ್ಟೆಂಬರ್ 7ರಿಂದ 16ರ ತನಕ ಈ ಚಾಂಪಿಯನ್ಶಿಪ್ ನಡೆಯಲಿದೆ.
ಮಂಗಳೂರು ವಿ.ವಿ ಅಕಾಡೆಮಿಕ್ ಕೌನ್ಸಿಲ್ ನ ವಿದ್ಯಾರ್ಥಿ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುವ ಇವರು ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ವಿವಿಧ ಚೆಸ್ ಪಂದ್ಯಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ .
ಇವರ ಈ ಸಾಧನೆಗೆ ಮತ್ತು ಗೆಲುವಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವ್ರಂದ ಶುಭಕೋರಿದ್ದಾರೆ.