ವಂಡ್ಸೆ (ಮೇ, 04): ಕೊಲ್ಲೂರಿನ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಅಪಾಯಕಾರಿ ಒಳಚರಂಡಿಯ ಮುಚ್ಚಳ ತೆರೆದ ಸ್ಥಿತಿಯಲ್ಲಿದ್ದು ,ಅದರಲ್ಲಿ ಚೂಪಾದ ಕಬ್ಬಿಣದ ಸರಳುಗಳು ಎದ್ದು ನಿಂತು ಹಲವು ದಿನಗಳಾಗಿವೆ.
ಕೊಲ್ಲೂರು ಶಿವಮೊಗ್ಗ ರಸ್ತೆಯ ಪರಬ್ರಹ್ಮ ಗೆಸ್ಟ್ ಹೌಸಿನ ಮುಂಭಾಗದ ತಿರುವಿನಲ್ಲಿ ಈ ಅಪಾಯಕಾರಿ ಒಳಚರಂಡಿ ಇದ್ದು ಜನತೆಗೆ ಸುಗಮ ಸಂಚಾರಕ್ಕೆ ಸವಾಲಾಗಿದೆ.
ಯಾವುದೇ ಜೀವ ಹಾನಿ ಆಗುವ ಮೊದಲು ಸಂಬಂಧಪಟ್ಟ ಇಲಾಖೆ ಕೂಡಲೇ ಇದನ್ನು ಗಮನಿಸಿ ಸರಿಪಡಿಸಬೇಕಾಗಿ ಗ್ರಾಮಸ್ಥರ ಪರವಾಗಿ ಪರಿಸರ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ.