ಬೈಂದೂರು (ಮೇ, 6): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್. ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನಿಯುಕ್ತಿಗೊಳಿಸಿ ಆದೇಶಿಸಿದೆ. ತಹಶೀಲ್ದಾರ್ ಬಸಪ್ಪ ಪೂಜಾರಿಯವರ ವರ್ಗಾವಣೆಯ ಬಳಿಕ ಬ್ರಹ್ಮಾವರದ ತಹಶೀಲ್ದಾರ್ ಕಿರಣ ಗೌರಯ್ಯ ಅವರು ಬೈಂದೂರಿನ ಪ್ರಭಾರ ತಹಶೀಲ್ದಾರರರಾಗಿ ಸೇವೆಸಲ್ಲಿದ್ದರು.
ಕೆಲವು ತಿಂಗಳಿನಿಂದ ಬೈಂದೂರು ತಾಲೂಕಿನ ತಹಶೀಲ್ದಾರ್ ಹುದ್ದೆ ಖಾಲಿಯಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದೀಗ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಸೇವೆಯನ್ನು ಪಡೆಯಲು ತುಂಬಾ ಅನುಕೂಲವಾದಂತಾಗಿದೆ.