ಕುಂದಾಪುರ (ಮೇ. 13) : ಕುಂದಾಪುರದ ಬೋರ್ಡ್ ಹೈಸ್ಕೂಲ್ನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕಲಾಕ್ಷೇತ್ರ, ಸೇವಾ ಭಾರತಿ, ಬಿಜೆಪಿ ಹಾಗೂ ಕಾಂಗ್ರೆಸ್ ಸ್ವಯಂ ಸೇವಕರ ಸಹಯೋಗದೊಂದಿಗೆ ಕರೋನಾ ಲಸಿಕೆ ನೀಡುವಿಕೆ ಹಲವು ದಿನಗಳಿಂದ ನಡೆಯುತ್ತಿದ್ದು ,ಗುರುವಾರದಂದು 18 ವರ್ಷಚ ಮೇಲ್ಪಟ್ಟು ನೋಂದಣಿ ಮಾಡಿಸಿಕೊಂಡು ಮೊಬೈಲ್ಗೆ ಸಂದೇಶ ಬಂದ 150 ಮಂದಿಗೆ ಕೊವಿಶೀಲ್ಡ್ ಲಸಿಕೆ ನೀಡಲಾಯಿತು.
ಲಸಿಕೆ ನೀಡುತ್ತಿರುವ ಸ್ಥಳಕ್ಕೆ ಕುಂದಾಪುರದ ಡಿವೈಎಸ್ಪಿ ಕೆ. ಶ್ರೀಕಾಂತ್ ಭೇಟಿ ನೀಡಿ ವ್ಯವಸ್ಥೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.