ಬೈಂದೂರು (ಮೇ, 13): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದ ಇದರ ಪ್ರವರ್ತಕರಾದ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ನೇತ್ರತ್ವದಲ್ಲಿ ಬೈಂದೂರು ತಾಲೂಕಿನ ಅಳವೆಕೋಡಿ, ತಾರಪತಿ, ಪಡುವರಿ ಹಾಗೂ ಉಪ್ಪುಂದ ವ್ಯಾಪ್ತಿಯ ಸುಮಾರು 350ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಬೇಸಿಗೆ ಸಂದರ್ಭದಲ್ಲಿ ಈ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎರುರಾಗುತ್ತಿದ್ದು, ಕಳೆದ ವರ್ಷವೂ ಸಹ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಯನ್ನು ಮಾಡಲಾಗಿತ್ತು.