ಕರಾವಳಿ, ಮಲೆನಾಡು ,ಉತ್ತರ ಕರ್ನಾಟಕ ಹೀಗೆ ರಾಜ್ಯದ ಉದ್ದಗಲಕ್ಕೂ ಡಾ.ಜಿ.ಶಂಕರ್ ರವರ ಹೆಸರು ಚಿರಪರಿಚಿತ. ಶಿಕ್ಷಣ, ಆರೋಗ್ಯ ಸುರಕ್ಷಾ, ರಕ್ತದಾನ ಶಿಬಿರ, ಅಶಕ್ತ ಕಲಾವಿದರಿಗೆ ನೆರವು, ಬಡ ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ ನೆರವು ಹೀಗೆ ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಹಲವು ಜನತೆಯ ಬದುಕಿಗೆ ಬೆಳಕಾದವರುನಾಡೋಜಾ ಡಾ.ಜಿ.ಶಂಕರ್.
ಕಂಡುಕೇಳರಿಯದ ಕರೋನಾ ನಮ್ಮ ರಾಜ್ಯವನ್ನು ಪ್ರವೇಶಿಸಿದಾಗ ಅದರ ತೀವ್ರತೆಯನ್ನು ಗಮನಿಸಿದ ಡಾ.ಜಿ.ಶಂಕರ್ ರವರು ಯುವಕರ ತಂಡವನ್ನು ಕಟ್ಟಿ ಆರೋಗ್ಯಸೇವೆಗೆ ಮುಂದಾದವರು. ಕರೋನಾ ಮೊದಲ ಅಲೆಯಲ್ಲಿ ತೊಂದರೆಗೊಳಗಾದವರಿಗೆ ಆಹಾರ ಪೂರೈಕೆಯ ಜೊತೆಗೆ ವೈದ್ಯಕೀಯ ಸಹಾಯವನ್ನು ನೀಡಿ ಜನತೆಗೆ ಸಹಾಯ ಹಸ್ತ ಚಾಚಿದ್ದರು. ತಮ್ಮ ಟ್ರಸ್ಟಿನ ಹೆಸರಿನಲ್ಲಿ ಕುಂದಾಪುರತಾಲೂಕು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಕಟ್ಟಡ ಇಂದು ಕೋವೀಡ್ ಆಸ್ಪತ್ರೆಯಾಗಿ ರೂಪಗೊಂಡಿದ್ದು ಅದೆಷ್ಟು ಕರೋನ ಪಿಡಿತರಿಗೆ ಆರೋಗ್ಯದ ಆಸರೆಯನ್ನು ಕೊಟ್ಟಿರುವ ಜೊತೆಗೆ ಸರಕಾರಕ್ಕೆ ತಾಲೂಕಿನಲ್ಲಿ ಕೋವಿಡ್ ನಿರ್ವಹಣೆಗೆ ತುಂಬಾ ಸಹಕಾರಿಯಾಗಿದೆ.
ತನ್ನ ಸೇವಾಕಾರ್ಯ ಇಷ್ಟಕ್ಕೆ ಸೀಮಿತವಾಗಿರದೆ ಕರೋನಾ ಎರಡನೇ ಅಲೆಯ ತೀವ್ರತೆಯನ್ನು ಗಮನಿಸಿದ ಡಾ. ಜಿ ಶಂಕರ್ ರವರು ಮತ್ತೊಮ್ಮೆ ತನ್ನ ಕೈಲಾದಷ್ಟು ಸಮಾಜಸೇವೆ ಮಾಡಲು ಮುಂದಾಗಿರುವುದು ಅವರ ಸೇವಾ ಕಾಳಜಿ ಹಾಗೂ ಹೃದಯ ಶ್ರೀಮಂತಿಕೆಯನ್ನು ವ್ಯಕ್ತಪಡಿಸುತ್ತದೆ.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಉಡುಪಿ,ದಕ್ಷಿಣ ಕನ್ನಡ ಹಾಗೂ ಸುತ್ತ ಮುತ್ತಲಿನ ಜಿಲ್ಲೆಯ ಕರೋನ ಸೋಂಕಿತರ ಚಿಕಿತ್ಸೆಗಾಗಿ 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾರ್ಕಳದಲ್ಲಿ ಆಕ್ಸಿಜನ್ ತಯಾರಿಕ ಘಟಕ ಸ್ಥಾಪನೆಗೆ ಡಾ.ಜಿ.ಶಂಕರ್ ಮುಂದಾಗಿದ್ದಾರೆ. ಅದಲ್ಲದೆ 45 ಲಕ್ಷ ರೂಪಾಯಿಗಳ 60 ಆಕ್ಸಿಜನ್ ಕಾನ್ಸೆಂಟ್ರೇಟರುಗಳನ್ನು ಕರೋನ ಸೋಂಕಿತರ ಚಿಕಿತ್ಸೆಗಾಗಿ ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಕಾರ್ಕಳ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಆಕ್ಸಿಜನ್ ಘಟಕವು 6 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು , ಇದರಿಂದ 60 ಕ್ಕಿಂತಲೂ ಅಧಿಕ ಬೆಡ್ ಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಾಗಲಿದೆ.
ಕರ್ನಾಟಕದ ವಿಜಯಪುರ ಜಿಲ್ಲೆಗೆ 15, ಕಲ್ಬುರ್ಗಿ ಜಿಲ್ಲೆಗೆ 10, ಯಾದಗಿರಿ ಜಿಲ್ಲೆಗೆ 10, ಉಡುಪಿ ಜಿಲ್ಲೆಗೆ 10, ದಕ್ಷಿಣ ಕನ್ನಡ ಜಿಲ್ಲೆಗೆ 10.ಒಟ್ಟು 60 ಆಕ್ಸಿಜನ್ ಕಾನ್ಸೆಂಟ್ರೇಟರುಗಳನ್ನು ಡಾ.ಜಿ.ಶಂಕರ್ ಕೊಡುಗೆಯಾಗಿ ನೀಡಿದ್ದಾರೆ. ಕರೋನಾ ಮೊದಲ ಅಲೆಗೆ ಮೃತರಾದವರ ಶವಸಂಸ್ಕಾರಕ್ಕೆ ಹಿಂದೆಟು ಹಾಕುತ್ತಿದ್ದ ಸಂದರ್ಭದಲ್ಲಿ ಯುವಕರ ತಂಡವನ್ನು ಕಟ್ಟಿದರು.
ಜಿ.ಶಂಕರ್ ಫ್ರಂಟ್ ಲೈನ್ ವಾರಿಯರ್ಸ್ ಹೆಸರಿನಆ ತಂಡವು ಇದುವರೆಗೆ ಕರೋನಾ ಸೋಂಕಿನಿಂದ ಮ್ರತಪಟ್ಟ 130 ಕ್ಕೂ ಅಧಿಕ ಶವಗಳನ್ನು ಅವರವರ ಧರ್ಮದ ಆಚರಣೆಗೆ ಅನುಗುಣವಾಗಿ ಹಾಗೂ ವಿವಿಧ ಮತಗಳ ಪದ್ದತಿಯಂತೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಬಹುಶಃ ಇಡೀ ರಾಜ್ಯವೇ ಪ್ರಸಂಶಿಸುವಂತಹ ಕಾರ್ಯ ಇದಾಗಿದೆ.
ಕರೋನಾ ಎರಡನೆಯ ಅಲೆಯ ಈ ಆರೋಗ್ಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯ ಅತ್ಯಂತ ಸಂಕಷ್ಟದ ಸಮಯದಲ್ಲಿ ಕರೋನ ಸೋಂಕಿತರ ಚಿಕಿತ್ಸೆಗಾಗಿ ಒಂದೂ ಕೋಟಿ 15 ಲಕ್ಷ ರೂಪಾಯಿಗಳ ಮೊತ್ತಗಳನ್ನು ವೆಚ್ಚ ಮಾಡಿ ಬೃಹತ್ ಆಕ್ಸಿಜನ್ ಘಟಕ ಹಾಗೂ 60 ಆಕ್ಸಿಜನ್ ಕಾನ್ಸೆಂಟ್ರೇಟರುಗಳನ್ನು ಉಚಿತವಾಗಿ ನೀಡಿರುವುದು ಅವರ ಹೃದಯ ಶ್ರೀಮಂತಿಕೆ ಹಿಡಿದ ಕನ್ನಡಿ.
ಕರುನಾಡ ಕರ್ಣ ನಾಡೋಜ ಡಾ.ಜಿ.ಶಂಕರ್ ರವರ ಮಾನವೀಯ ನೆಲೆಯ ಸೇವಾ ಕೈಂಕರ್ಯ ಹೀಗೆ ನಿರಂತರವಾಗಿ ಮುಂದುವರಿಯಲಿ.
ನಿಮ್ಮ ಸೇವಾ ಮನಸ್ಸಿಗೆ ಹ್ಯಾಟ್ಸ್ ಆಫ್ ಯೂ ಸರ್.
🖋ಪ್ರವೀಣ್ ಗಂಗೊಳ್ಳಿ