ಕುಂದಾಪುರ (ಮೇ, 20) : ಮೂರ್ನಾಲ್ಕು ದಿನದ ಹಿಂದೆ ತೌಖ್ತೆ ಚಂಡಮಾರುತದ ಪರಿಣಾಮ ಕರಾವಳಿ ಭಾಗದಪ್ಪಳಿಸಿದ ಭಾರಿ ಗಾಳಿ ಮಳೆಯ ಕಂಡು ಬೆಪ್ಪಾಗಿ ಬೆಚ್ಚಗೆ ಮನೆಯೊಳಗೇ ನಾವು ನೀವು ಕುಳಿತಿದ್ದಂತು ನಿಜ. ಆದರೆ ಅದೇ ಪರಿಸ್ಥಿತಿಯಲ್ಲಿ ವ್ಯವಸ್ಥಿತ ಸೂರಿಲ್ಲದೆ ಸೋರುವ ಹಟ್ಟಿಯೊಳಗಡೆ ಸುರಿವ ಮಳೆಗೆ, ಕೊರೆವ ಚಳಿಗೆ ಮೈಯೊಡ್ಡಿ ಗಡಗಡನೆ ನಡುಗುತ್ತಾ ಆ ಕರಾಳ ರಾತ್ರಿಯನ್ನು ಗೋಳಿನಲಿ ಕಳೆದ ಈ ಗೋವುಗಳ ಸ್ಥಿತಿಯಂತೂ ನಾವು ಕಣ್ಣಾರೆ ಕಾಣುವುದಕ್ಕಿಂತಲೂ ಬಹಳ ಶೋಚನೀಯವಾಗಿದ್ದಿದಂತು ಸತ್ಯ.
ಏನೇ ಹೇಳಿ ಗೋವುಗಳು ಮಾನವನಿಗಿಂತಲೂ ಅಧಿಕ ಬುದ್ದಿವಂತ ಹಾಗೂ ಭಾವನಾತ್ಮಕ ಜೀವಿಗಳು. ತನ್ನ ಹೊಟ್ಟೆಹೊರೆದುಕೊಳ್ಳುವುದಕ್ಕೆ ಕಷ್ಟಪಡುವ ಕೋಟೇಶ್ವರ ಸಮೀಪದ ಹಳೆ ಅಳಿವೆ ಗ್ರಾಮದ ಆ ಒಂಟಿ ಮಹಿಳೆ ಪಡುವ ಪಾಡನು ಕಂಡು ಹಟ್ಟಿಯೊಳಗಿನ ರಾಸುಗಳ ತೇವಗೊಂಡ ಕಣ್ಣಾಲೆಗಳು ಕಾಣುವ ಸನ್ನಿವೇಶ ಮಾತ್ರ ಅತ್ಯಂತ ಭಾವುಕವಾಗಿತ್ತು.
ಇಂತಹ ಸಂಕಷ್ಟ ಸಂದರ್ಭದ ಸ್ಥಿತಿಯನ್ನು ಮನಗಂಡು ವಿಶ್ವಹಿಂದೂ ಪರಿಷತ್, ಬಜರಂಗದಳ ಉಡುಪಿ, ಕುಂದಾಪುರ ಪ್ರಖಂಡ ಇದರ ಸೇವಾ ಚಟುವಟಿಕೆಯಡಿಯಲ್ಲಿ ಈ ಬಡ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಸುಸಜ್ಜಿತ ದನದ ಕೊಟ್ಟಿಗೆಯೊಂದನ್ನು ನಿರ್ಮಿಸಿ ಕೊಡಲು ಯೋಜನೆಯೊಂದನ್ನು ರೂಪಿಸಿದ್ದಾರೆ. ಈ
ಸಲುವಾಗಿ ಸಮಾಜದ ಈ ಸೇವಾ ಕೈಂಕರ್ಯದ ಸತ್ಕಾರ್ಯದಲ್ಲಿ ಪಾಲ್ಗೊಳ್ಳಲು ಸರ್ವರಿಗೂ ಇದೊಂದು ಸದಾವಕಾಶ. ತನು – ಮನ – ಧನ ಸಹಾಯಗಳ ಮೂಲಕ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳ ಬೇಕು ಎಂದು ತಿಳಿಸಲಾಗಿದೆ.
ಸಂಪರ್ಕ ಮತ್ತು ಧನ ಸಹಾಯಕ್ಕಾಗಿ
Google Pay Number – 9740044323