ಬಂಧುಗಳೆ,
ಇಂದು ವಿಶ್ವ ಪರಿಸರ ದಿನ. ಅದರ ನೆನಪಿಗಾಗಿ ಮತ್ತು ನಮ್ಮ ಉಳಿವಿಗಾಗಿ ಎಲ್ಲರೂ ಒಂದೊಂದು ಗಿಡ ನೆಡೋಣ. 138 ಕೊಟಿ ಜನ ಒಂದೊಂದು ಗಿಡ ಎಂದರೆ 138 ಕೋಟಿ ಆಕ್ಸಿಜನ್ ಸಿಲಿಂಡರ್ಗಳು ಎಂದರ್ಥ. ಅದರಲ್ಲಿ 38 ಕೋಟಿ ತೆಗೆದರೂ 100 ಕೋಟಿ ಜನ ಮನಸ್ಸು ಮಾಡಿ ಒಂದೊಂದು ಗಿಡ ನೆಟ್ಟರೂ ನೂರು ಕೋಟಿ ಆಕ್ಸಿಜನ್ ಸಿಲಿಂಡರ್ ಲೆಕ್ಕ ಆಗುತ್ತದೆ. ಆದ್ದರಿಂದ ಬಂಧುಗಳೇ, ಮರೆಯದೆ ಪ್ರತಿಯೊಬ್ಬರು ಒಂದೊಂದು ಅಥವಾ ನಿಮ್ಮ ಕೈಲಾದಷ್ಟು ಗಿಡಗಳನ್ನು ನೆಟ್ಟು “ಕೆಲವರು ಕೇಳುತ್ತಾರಲ್ಲ, ಸಮಾಜಕ್ಕೆ ನಿನ್ನ ಕೊಡುಗೆ ಏನು ಎಂದು”. ಗಿಡ ನೆಡುವುದರ ಮುಖಾಂತರ ಸಮಾಜಕ್ಕೆ ನನ್ನ ಸಣ್ಣ ಕೊಡುಗೆ ಎಂದು ಹೇಳಿಕೊಳ್ಳುವ ಸಮಯ ಬಂದಿದೆ.
ನಿಮ್ಮ ಮುಂದಿನ ಪೀಳಿಗೆಗೆ ನೀವು ಉತ್ತಮ ಆರೋಗ್ಯ, ಸ್ವಚ್ಛ ಪರಿಸರ ಕೊಟ್ಟರೆ ಅದಕ್ಕಿಂತ ದೊಡ್ಡ ಆಸ್ತಿ ಸಂಪತ್ತು ಬೇರೊಂದಿಲ್ಲ. ಅವರು ಆರೋಗ್ಯವಾಗಿದ್ದರೆ ಮಾತ್ರ ಅವರ ಭವಿಷ್ಯ ಸುಂದರವಾಗಿರುತ್ತದೆ.
ದಯವಿಟ್ಟು ಈ ದಿನ ಒಂದು ಚಾಲೆಂಜ್ ಎಲ್ಲರೂ ಸ್ವೀಕರಿಸೋಣ. ಕನಿಷ್ಠ ಒಂದು ಅಥವಾ ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಅದರ ಫೋಟೋ, ಸೆಲ್ಫಿ ಶೇರ್ ಮಾಡಿ. ಮತ್ತು ಮುಂದಿನ ವರ್ಷದವರೆಗೂ ಆ ಗಿಡ ಬದುಕುಳಿಯುವಂತೆ ಪ್ರಯತ್ನಿಸಿ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಪ್ರಯತ್ನ ಪಡೋಣ. ಸಮಾಜಕ್ಕೆ ಮಾದರಿಯಾಗೋಣ.
🙏🙏ಹರೀಶ್ ಕಾಂಚನ್ 🙏🙏
🌴🌴🌴🌴🌳🌳🌳🌳.