ಅವರ ಒಂದು ಹಿತನುಡಿಯೇ ಸಾಕು ನಿಮ್ಮ ಸಂಕಷ್ಟಗಳ ಸಾಂತ್ವನಕ್ಕೆ . ಅದರಲ್ಲೂ ಅವರ ಶ್ರೀರಕ್ಷೆ, ಸಹಾಯ ಹಾಗೂ ಸಹಕಾರ ಸಿಕ್ಕರಂತೂ ನೀವು ನಿಜವಾಗಿಯೂ ಜೀವನದಲ್ಲಿ ಸಾಧನೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ಜೀವನದಲ್ಲಿ ಎಂದಿಗೂ ಸೋತೆ ಎನ್ನುವ ಭಾವನೆಯೊಂದಿಗೆ ಜೀವನ ನೆಡೆಸಬೇಡಿ ,ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುವೆ ಎನ್ನುವ ಛಲದೊಂದಿಗೆ ಜೀವನ ನೆಡೆಸಿ ಎನ್ನುವ ಅವರ ಆದರ್ಶ ಪಾಲನೆಯ ಬದುಕು ಅನುಕರಣೀಯ.
ಧೈರ್ಯದಿಂದ ಮುಂದೆ ಹೋಗಿ ,ಜಗತ್ತಿನ ಎಲ್ಲಾ ಕೆಲಸವನ್ನು ಬಲ್ಲೆ ಎಂಬ ಆತ್ಮ ವಿಶ್ವಾಸ ಇರಲಿ, ಶುಭ ಕಾರ್ಯ ಆರಂಭಿಸಿ ಬಿಡಿ ಎನ್ನುವ ಛಲವಾದಿ. ತಿದ್ದದೆ ತೀಡದೆ ಗೊಂಬೆ ಅಂದ ಕಾಣುವುದಿಲ್ಲ, ಭೂಮಿಯನ್ನು ಉಳದೆ ಬೆಳೆ – ಬೆಳೆಯಲಾಗುದಿಲ್ಲ, ಕಷ್ಟ- ನಷ್ಟ ಅನುಭವಿಸಿಯೇ ಬದುಕಿನಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡುವ ಗುಣವಂತ ಶ್ರೀ ಗೋವಿಂದ ಬಾಬು ಪೂಜಾರಿ. ಬರಡು ಬದುಕನ್ನು ಹಸನಾಗಿಸುವ ಸಾಮರ್ಥ್ಯ ಮತ್ತು ಪ್ರಯತ್ನ ನಮ್ಮಲ್ಲೇ ಅಡಗಿರುತ್ತದೆ. ಅದನ್ನು ಹೊರ ತರಲು ಎಲ್ಲಾ ಯುವಕರು ಪ್ರಯತ್ನಿಸಿಬೇಕು ಎನ್ನುವ ಅವರ ನುಡಿಮುತ್ತುಗಳೇ ಸಾಕು ಬದುಕಿನಲ್ಲಿ ಯಶಸ್ವಿನ ಹೆಜ್ಜೆ ಇಡಲು.
ಆಗಿಹೋದ ಕ್ಷಣಗಳ ಬಗ್ಗೆ ಚಿಂತಿಸಬೇಡಿ ,ಅದು ಕಂಬನಿ ತರುತ್ತದೆ, ಮುಂದೆ ಆಗುವ ಕ್ಷಣಗಳ ಬಗ್ಗೆ ಚಿಂತಿಸ ಬೇಡಿ, ಮುಂದಿನ ಕ್ಷಣಗಳನ್ನು ಖುಷಿಯಿಂದಲೇ ಎದುರಿಸಿ ಎಂದು ಹೇಳುವ ಒರ್ವ ಮಾರ್ಗದರ್ಶಕ.
ಮನೆಯ ದೊಡ್ಡಣ್ಣನಂತೆ, ಕಷ್ಟಗಳನ್ನು ಆ ಕ್ಷಣದಲ್ಲೇ ನಿವಾರಿಸುವ ಶಕ್ತಿ ಇರುವ ವ್ಯಕ್ತಿ. ಬಡವರ ದುಃಖ ನೋಡಿ ಕರುಣೆ ತೋರುವ ಮನುಷ್ಯತ್ವ ಮತ್ತು ನೊಂದವರ ಕಷ್ಟ ದೂರ ಮಾಡಲು ಪರಿಹಾರ ತೋರುವ ಇವರ ದೇವತ್ವ ಗುಣ ನಿಜಕ್ಕೂ ಶ್ಲಾಘನೀಯ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣಧರ್ಮ ಪ್ರತಿಯೊಬ್ಬ ಉಳ್ಳವರ ಮನದಲ್ಲಿ ಮನೆ ಮಾಡಿದರೆ ಬಡವರ ಉನ್ನತಿ ಆಗುವುದರಲ್ಲಿ ಸಂದೇಹ ಇಲ್ಲ ಎನ್ನುವುದು ಇವರ ಆದರ್ಶವಾದ. ಆ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾದ ಶ್ರೀ ಗೋವಿಂದ ಬಾಬು ಪೂಜಾರಿಯವರು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ್ನು ಹುಟ್ಡುಹಾಕಿ, ಅದರಿಂದ ಕೊಡ ಮಾಡುವ ಸಹಾಯವನ್ನು ಯಾವುದೇ ಪ್ರಚಾರಕ್ಕಾಗಿ ಮಾಡದೇ, ಬೇರೆಯವರಿಗೆ ನಮ್ಮ ಟ್ರಸ್ಟ್ ನೋಡಿ ಸ್ವಲ್ಪವಾದರೂ ಪ್ರೇರಣೆಯಾಗಲಿ ಎನ್ನುವುದೇ ನನ್ನ ಮನದಾಸೆ ಎಂದು ವಿನಮ್ರವಾಗಿ ನುಡಿಯುತ್ತಾರೆ.
ಇಂದು ಬೈಂದೂರು ತಾಲೂಕಿನ ಹಲವು ಗ್ರಾಮಗಳ ನೂರಾರು ಬಡವರ ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರು , ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಬರಿಸಲು ಸಹಾಯ ಧನ , ವಸತಿ ರಹಿತರಿಗೆ ಮನೆ ನಿರ್ಮಾಣದ ಕಾರ್ಯ ಇವರ ಟ್ರಸ್ಟ್ ವತಿಯಿಂದ ನೇರವೆರುತ್ತಿದೆ.
ಈ ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಬಡವರ ಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಿದ ಇವರು ತನ್ನ ದುಡುಮೆ ಒಂದು ಪಾಲಿನಲ್ಲಿ ಬಡವರ ದೈನಂದಿನ ಬದುಕಿನ ನಿರ್ವಹಣೆಗೆ ಮೀಸಲಿಟ್ಟು ,ಬಡವರಿಗಾಗಿ ದಿನಸಿ ಸಾಮಗ್ರಿಗಳನ್ನು , ಮೆಡಿಕಲ್ ಕಿಟ್ ಗಳನ್ನು ವರಲಕ್ಷೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡಿ ಬಡವರ ಬಾಳಿನ ಆಶಾ ಕಿರಣ ಆಗಿದ್ದಾರೆಂದರೆ ಅತಿಶಯೋಕ್ತಿ ಆಗದು.
ಶ್ರೀಯತರು, ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಚಮ್ಮಾನ್ ಹಿತ್ಲು ಮೂಲದವರು. ಕಡು ಬಡತನದ ಭೂತ ಇವರ ಬೆನ್ನುಹತ್ತಿ, ಇವರು ಎಳೆವೆಯಲ್ಲಿಯೇ ಹುಟ್ಟೂರನ್ನು ಬಿಟ್ಟು ದುಡಿಯಲು ಮುಂಬೈ ಸೇರಿದವರು. ಅಲ್ಲಿ ಆರಂಭದಲ್ಲಿ ಅವರು ಪಟ್ಟ ಕಷ್ಟ ,ವ್ಯಥೆ, ನೋವು ಸಹಿಸಲಾಗದ್ದು. ಕಲ್ಲರಳಿ ಹೂವಾದಂತೆ ನಿರಂತರ ಪರಿಶ್ರಮ ,ಅವಿರತ ಪ್ರಯತ್ನದ ಫಲವಾಗಿ ಇಂದು ಇಷ್ಟು ಎತ್ತರಕ್ಕೆ ಏರಿದ್ದಾರೆ. ಐದು ರಾಜ್ಯಗಳಲ್ಲಿ ಚೆಫ್ ಟಾಕ್ (Chef Talk )ಫುಡ್ ಅಂಡ್ ಹಾಸ್ಪಿಟಾಲಿಟಿ ಸಂಸ್ಥೆ, ಹಾಗೂ ಮತ್ಸ್ಯ ಬಂಧನ ಸಂಸ್ಥೆ ಹಾಗೂ ಹಲವು ಹೋಟೆಲ್ ಗಳ ಮಾಲೀಕರಾದ ಶ್ರೀಯುತರು ಪ್ರಸ್ತುತ 5ರಿಂದ 6 ಸಾವಿರ ಕಾರ್ಮಿಕರಿಗೆ “ಅನ್ನದಾತ” ರಾಗಿದ್ದಾರೆ.
ಮುಂದೆ 10ಸಾವಿರ ಕೆಲಸಗಾರರ ಮನೆಗೆ ಬೆಳಕು ಆಗುವ ಅಭಿಲಾಸೆ ಅವರದ್ದು. Chef Talk Food & Hospitality Service Pvt. Ltd, Chef Talk Nutri foods Pvt.Ltd, Pragnya Sagar Hotel & Resort Pvt.Ltd, Matsya Bhandana Pvt. Ltd, Shri Varalaxmi Charitable Trust (R) Uppunda, ಈ ಎಲ್ಲಾ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸರಳ ಸಜ್ಜನ ವ್ಯಕ್ತಿ ಶ್ರೀ ಗೋವಿಂದ ಬಾಬು ಪೂಜಾರಿ.
ಇವರ ಈ ಎಲ್ಲಾ ಸಂಸ್ಥೆ ಇನ್ನೂ ಅಭಿವೃದ್ಧಿ ಕಾಣಲಿ,
ಮಾನವೀಯ ನೆಲೆಯಲ್ಲಿ ಇವರು ಮಾಡುವ ಜನಸೇವೆ ಸದಾ ನಿರಂತರವಾಗಿರಲಿ ಎನ್ನುವುದು ನಮ್ಮ ಹರಕೆ ಮತ್ತು ಹಾರೈಕೆ.
✍️ಈಶ್ವರ ಸಿ ನಾವುಂದ