ಕಾಣದ ಜೀವಿಯ ಕಣ್ಣಾಮುಚ್ಚಾಲೆ
ಭಯವನು ಹೂಡಿ ಆವರಿಸಿಹುದು ಕತ್ತಲೆ
ಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!
ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?
ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರ
ಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರ
ಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರ
ದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.
ಬಡವಾಯ್ತು ಬದುಕು
ಆಶಾವಾದವಷ್ಟೇ ಇನ್ನುಳಿದ ಬೆಳಕು
-ಕೊರೊನಾ ಕಥೆ.

-ಅರ್ಚನಾ .ಆರ್. ಕುಂದಾಪುರ










