ಮುಧೋಳ(ಜು,25): ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ, ಶ್ರೀ ಎಸ್. ಆರ್. ಕಂಠಿ ಮಹಾವಿದ್ಯಾಲಯದ ಮುಧೋಳ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಲೋಕೇಶ ರಾಠೋಡ ರವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಪಿ.ಹೆಚ್ ಡಿ ಪದವಿ ನೀಡಿದೆ.
ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಡಾ. ಹುಚ್ಚೇಗೌಡ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆಫ್ ಲೇಬರ್ ಮೈಗ್ರೇಶನ್ ಫ್ರಮ್ ನಾರ್ತ್ ಕರ್ನಾಟಕ ಟು ಗೋವಾ” ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಇವರಿಗೆ ಪಿ.ಹೆಚ್ ಡಿ ಪದವಿ ಲಭಿಸಿದೆ.
ಈ ಸಾಧನೆಗೆ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ, ಮಹೇಶ.ಎನ್. ಅಥಣಿ, ಸಂಘದ ಕಾಲೇಜು ಆಡಳಿತಗಳ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ, ಸಂಘದ ಕಾಲೇಜು ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿ ಡಾ. ಎಸ್. ಎನ್.ಗಾಂವಕರ್ , ಪ್ರಾಚಾರ್ಯರಾದ ಪ್ರೊ. ಬಿ.ಆರ್. ಪಾಟೀಲ ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.