ಬಾನಿಂದ ಜಾರಿ ಹಂಚಿನ ಮೇಲೆರಗಿ ಯಾರಿಗೂ ಕಾಯದೆ
ನನ್ನ ಬಳಿ ಬಂದು ಉಲ್ಲಾಸ ನೀಡಿದ್ದು
ಯಾರಿಗೂ ಗೊತ್ತಾಗಲಿಲ್ಲ
ಕೆಲಸವಿಲ್ಲದೆ ಕುಳಿತ ನನ್ನೊಬ್ಬನನ್ನು ಬಿಟ್ಟು …
ವರ್ಣಿನೆಗೂ ಮೀರಿದ ನಿನ್ನ ಮಾಯೆ
ನಿನ್ನ ಕಿರು ಹನಿಯೇ ಪ್ರಕ್ರತಿಗೆ ಛಾಯೆ ಗೊತ್ತಾಗುತ್ತಿಲ್ಲವಲ್ಲಾ ನಿನ್ನ ತುಂತುರು ಹನಿಗಳ ಲೀಲೆ
ಆಕಾಶ ಬಿರಿದು ಹೊರ ಬರಲು ಸಾಲು ನಿಂತ ಹನಿಗಳ ಸರದಿ.
ನೀ ಹಿತ ಮಿತವಾಗಿ ಬಂದರಷ್ಟೇ ಜಗಕೆ ನೆಮ್ಮದಿ
ಜೋರಾಗಿ ಸುರಿದರೆ ಮಾಡಬೇಕಾದಿತು ನಿನ್ನ ಮೇಲೆ ವರದಿ
✍️ಈಶ್ವರ ಸಿ. ನಾವುಂದ