ಶಿವ೯(ಜು, 12): ಕೃಷಿ ಮಾನವನ ಕುಲ ಕಸುಬು. ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಇಂದು ಕೃಷಿಯಲ್ಲಿ ಯುವ ಜನತೆಗೆ ಆಸಕ್ತಿ ಕಡಿಮೆಯಾಗಿದೆ.ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾರ್ಯ ಇಂದು ಸಾಗುತ್ತಿದೆ.
ಈ ನಿಟ್ಟಿನಲ್ಲಿ ಯುವಜನತೆ ಕ್ರಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆಯ ಜೊತೆಗೆ ಭೂಮಿಯನ್ನು ಹಸಿರಾಗಿಸಿ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿ ಎನ್ನುವ ಸದುದ್ದೇಶದೊಂದಿಗೆ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗ್ರೀನ್ ಟೀಚರ್ ಪೋರಂನ ಸಹಭಾಗಿತ್ವದಲ್ಲಿ ಎನ್ಎಸ್ಎಸ್, ಎನ್ ಸಿಸಿ,ರೋವರ್ಸ್ & ರೇಂಜರ್ಸ್,ರೆಡ್ ಕ್ರಾಸ್,ರೋಟರಿ ಶಿವ೯ ಇವರ ಸಂಯುಕ್ತ ಆಶ್ರಯದಲ್ಲಿ ಕುಂಜಿಗುಡ್ಡೆ ಪಿಲಾರ್ ಶ್ರೀಫೆಡ್ರಿಕ್ ಕ್ಯಾಸ್ತಲಿನೊ ಮತ್ತು ಶ್ರೀಮತಿ ಹೆಲೆನ ಕ್ಯಾಸ್ತಲಿನೊ ಇವರ ಮನೆಯ ಗದ್ದೆಯಲ್ಲಿ ನೇಜಿ ನಾಟಿ ಕ್ರಷಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯ ಪ್ರಶಸ್ತಿ ವಿಜೇತ ರೋಟರಿ ಕಾರ್ಯಕ್ರಮದ ಮುಖ್ಯ ರೂವಾರಿ ಶ್ರೀರಾಘವೇಂದ್ರ ನಾಯಕ್ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿ ನಾವು ಸಮಾಜ ಮುಖಿಯಾಗಿ ಬೆಳೆಯಬೇಕು,ವಿದ್ಯಾರ್ಥಿಗಳು ಸಮಾಜ ಮತ್ತು ಕಾಲೇಜನ್ನು ಬೆಸೆಯುವ ಕೊಂಡಿಗಳು, ಆದುದರಿಂದ ಸಾಮಾಜಿಕ ಕೊಡು-ಕೊಳ್ಳುವಿಕೆಯು ಆರೋಗ್ಯ ಪೂರ್ಣ ಪರಿಸರ ನಿರ್ಮಿಸಲು ಸಹಕಾರಿಯಾಗುತ್ತದೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾಜ ಸೇವೆಯು ನಿರಂತರವಾದಾಗ ಒಂದು ಉತ್ತಮ ಸಮಾಜದ ಸಹಭಾಗಿತ್ವಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್
ಮಾತನಾಡಿ ಇಂದಿನ ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾಲೇಜಿನ ಹಳೆವಿದ್ಯಾಥಿ೯ ಶ್ರೀಜಾಕ್ಸನ್ ಹಾಗೂ ಇತರರ ಸಹಕಾರ ಶ್ಲಾಘನೀಯ ಎಂದು ಹೇಳಿದರು.
ನಮ್ಮ ಈ ಕಾರ್ಯಕ್ರಮದ ಉದ್ದೇಶ ಮುಂದಿನ ಪೀಳಿಗೆ ನಮ್ಮ ಮಣ್ಣಿನ ಸಂಬಂಧವನ್ನು ಉಳಿಸಿಕೊಳ್ಳುವುದರ ಜೊತೆಗೆ ಕೃಷಿ ಕಾರ್ಯಗಳಲ್ಲಿ ಭಾಗಯಾಗಿ ಸಮಾಜ ಸೇವೆ ಮಾಡುವುದು,ಕೃಷಿ ಸಂಬಂಧಿ ಕಲಿಕೆಯೂ ಆಗಿದೆ ಎಂದು ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನು ಸ್ವಾಗತಿಸಿದ ಗ್ರೀನ್ ಟೀಚರ್ ಪೋರಂನ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕಿಯೂ ಆದ ಕು.ಯಶೋಧ ಪ್ರಸ್ತಾವಿಕ ಮಾತುಗಳಲ್ಲಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಶಿವ೯ದ ಕಾರ್ಯದರ್ಶಿ ರೋಟರಿ ಶ್ರೀಜಿನೇಶ್ ಬಳ್ಳಾ ಲ್,
ಪತ್ರಕರ್ತ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ಕಾಪು ವಲಯ ಅಧ್ಯಕ್ಷರಾದ ರೋಟರಿ ಶ್ರೀಪುಂಡಲೀಕ ಮರಾಠೆ, ಕಾಲೇಜಿನ ಎನ್ ಸಿ ಸಿ ಘಟಕದ ಅಧಿಕಾರಿ ಲೆಪ್ಟಿನೆಂಟ್ ಶ್ರೀ ಕೆ.ಪ್ರವಿಣ್ ಕುಮಾರ್,ಎನ್ ಎಸ್ ಎಸ್ ಘಟಕದ ಸಂಯೋಜಕ ಶ್ರೀಪ್ರೇಮನಾಥ್,ರೇಂಜರ್ಸ &ರೋವರ್ಸ ಘಟಕದ ಶ್ರೀಪ್ರಕಾಶ್ ,ಶ್ರೀಮತಿ ಸಂಗೀತಾ,ರೆಡ್ ಕ್ರಾಸ್ ಘಟಕ ದ ಶ್ರೀಮುರಳಿ ,ಅಧ್ಯಾಪಕ ಸಂಘದ ಕಾಯ೯ದಶಿ೯ ಶ್ರೀಮತಿ ರೀಮಾ ಲೋಬೊ,ಹಿರಿಯ ಉಪನ್ಯಾಸಕರಾದ ಶ್ರೀವಿಠಲ್ ನಾಯಕ್ ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು, ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರು ಮತ್ತು ವಿದ್ಯಾರ್ಥಿಗಳು ವಿಶೇಷವಾಗಿ ಹಳೆವಿದ್ಯಾಥಿ೯ಗಳು ಭಾಗವಹಿಸಿ ಕಾರ್ಯಕ್ರಮ ವನ್ನು ಚಯಶಸ್ವಿ ಗೊಳಿಸುವಲ್ಲಿ ಸಹಕರಿಸಿದರು. ಅತಿಥಿಗಳು ಮತ್ತು ನಾಟಿ ಕಾರ್ಯಕ್ಕೆ ಗದ್ದೆಯನ್ನು ಒದಗಿಸಿ ವ್ಯವಸ್ಥೆಗೊಳಿಸಿ ಪೂರ್ಣ ಸಹಕಾರ ಕೊಟ್ಟ ಶ್ರೀಫೆಡ್ರಿಕ್ ಕ್ಯಾಸ್ತಲಿನೊ ಇವರಿಗೆ ಕಾಲೇಜಿನ ಪ್ರಾಂಶುಪಾಲರು ಫಲಬಿಡುವ ಸಸಿಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ ಅವರಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು.