ಕುಂದಾಪುರ (ಜು, 17): ರೋಟರಿ ಕ್ಲಬ್ ಕುಂದಾಪುರ ದ 2021- 22 ನೇ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಜುಲೈ,16 ರಂದು ಕೋಟೇಶ್ವರದ ಸಹನ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಜರುಗಿತು. ರೋಟರಿ ವರ್ಷ 2021- 22ರ ಕ್ಲಬ್ ನ ಸಾರಥ್ಯವನ್ನು Rtn Phf ಶಶಿಧರ್ ಹೆಗ್ಡೆಯವರು ವಹಿಸಿಕೊಂಡರು. ಸಮಾಜಸೇವೆಯಲ್ಲಿ ರೋಟರಿಯ ಮಹತ್ವ ಹಾಗೂ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ತಿಳಿಸಿ ಸದಸ್ಯರ ಸಹಕಾರವನ್ನು ಕೋರಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಸುರೆಂದ್ರ ಶೆಟ್ಟಿ ಕೊಡ್ಲಾಡಿ, ಮೆಡಿಕಲ್ ಡೈರೆಕ್ಟರ್, Spine and Ortho Care Center ಬೆಂಗಳೂರು ಇವರು ಮಾತನಾಡಿ ತಾವು ಇದೇ ಕ್ಲಬ್ಬಿನ ಅಧ್ಯಕ್ಷರಾಗಿದ್ದಾಗ ಮಾಡಿದ ಸೇವಾಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾ, ಸಮಾಜಸೇವೆಯ ಮಹತ್ವವನ್ನು ತಿಳಿಸಿ ಶ್ರೀ ಶಶಿಧರ ಹೆಗ್ಡೆ ಮತ್ತು ನೂತನ ತಂಡಕ್ಕೆ ಶುಭ ಹಾರೈಸಿದರು.
ಈ ವರ್ಷ 23 ನೂತನ ಸದಸ್ಯರು ಕ್ಲಬ್ ಗೆ ಸೇರ್ಪಡೆಗೊಂಡರು. ರೋಟರಿ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ಜೆ.ಪಿ ಶೆಟ್ಟಿ ಯವರು ನೂತನ ಸದಸ್ಯರನ್ನು ಕುಂದಾಪುರ ರೋಟರಿ ಕ್ಲಬ್ಬಿಗೆ ಸೇರ್ಪಡೆಗೊಳಿಸುವುದರ ಜೊತೆಗೆ ಹೊಸ ತಂಡಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಲಯ ಒಂದರ Zonal Lieutenant ಶ್ರೀ ರಾಜರಾಮ್ ಶೆಟ್ಟಿ ಯವರು ಕ್ಲಬ್ಬಿನ ಬುಲೆಟಿನ್ ಎಕೋರ್ಡ ನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಹಾಗೆಯೇ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಹೊಸ ಕಟ್ಟಡಕ್ಕೆ ಅನುದಾನವನ್ನು ನೀಡಿದ ಗಿಳಿಯಾರು ಉದಯ ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಅವರು ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರಾಗಿದ್ದ ತಂದೆ ದಿವಂಗತ ಗಿಳಿಯಾರು ಕುಶಲ ಹೆಗ್ಡೆಯವರ ರೋಟರಿಯ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರ ಸಹೋದರಿ ಸ್ನೇಹ .ಪಿ. ರೈ ಯವರು ಉಪಸ್ಥಿತರಿದ್ದರು. ಹಿಂದಿನ ವರ್ಷದಲ್ಲಿ ಕ್ಲಬ್ ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀ ಸತೀಶ್ ಕೊತ್ವಾಲ್ ರವರು ಕ್ಲಬ್ ನ ವರದಿಯನ್ನು ಒಪ್ಪಿಸಿದರು.
ಪದಾಧಿಕಾರಿಗಳಾಗಿ Immediate ಪೂರ್ವಾಧ್ಯಕ್ಷ ರೋಟೆರಿಯನ್ ಮಹಮ್ಮದ್ ಅಶ್ಫಕ್, ಅಧ್ಯಕ್ಷರಾದ Rtn ವಕಟೇಶ್ ,ಉಪಾಧ್ಯಕ್ಷ Rtn. ಶ್ರೀಪಾದ ಉಪಧ್ಯಾಯ ,ಜೊತೆ ಕಾರ್ಯದರ್ಶಿ Rtn. ನಾಗರಾಜ್ ಶೆಟ್ಟಿ, ಕೋಶಾಧಿಕಾರಿ Rtn.ಪ್ರದೀಪ್ ವಾಜ್, Sergeant at arms ಗಣೇಶ್ ಐತಾಳ್, ಕ್ಲಬ್ ಸರ್ವೀಸ್ ಡೈರೆಕ್ಟರ್ Rtn ಟಿ.ಬಿ.ಶೆಟ್ಟಿ, Vocational service Rtn. ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ, Community service Rtn. ಕೆ.ಆರ್ .ನಾಯ್ಕ್, International service Rtn. ಪ್ರಶಾಂತ್ ತೋಳಾರ್,, Youth service Rtn. ಸತೀಶ್ ಕೊತ್ವಾಲ್ ,Membership chairman Rtn.ಗೋಪಾಲ ಕ್ರಷ್ಣ ಶೆಟ್ಟಿ, Public image Rtn ಡಾ.ರಾಜರಾಮ್ ಶೆಟ್ಟಿ, TRF Chairman Rtn ರವಿರಾಜ್ ಶೆಟ್ಟಿ, Literacy Chairman Rtn.ಪಾರ್ವತಿ ಕೊತ್ವಾಲ್ , pulse polio Chairman ಡಾ.ರಾಜೀವ್ ಶೆಟ್ಟಿ, District project Rtn .ಕೆ.ಸಿ .ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಕುಮಾರ್ .ಎಸ್ .ಕಾಂಚನ್ ರವರು ವಂದನಾರ್ಪಣೆಗೈಯುವುದರ ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಿದರು.