ಬೆಂಗಳೂರು (ಜು, 18) : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜು. 20ಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ ಎಂದು ಪಿ.ಯು ಶಿಕ್ಷಣ ಇಲಾಖೆಯ ನಿರ್ದೇಶಕರ ಕಛೇರಿಯಿಂದ ಪ್ರಕಟಣೆ ಹೊರಬಿದ್ದಿದೆ.
2020-21ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸುವ ಸಲುವಾಗಿ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ.
ಫಲಿತಾಂಶ ಪ್ರಕಟಗೊಳಿಸುವ ವಿಚಾರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದೇ ವ್ಯವಸ್ಥಿತವಾಗಿ ಫಲಿತಾಂಶ ನೀಡಲಿದೆ.
ಈ ಬಾರಿ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದ್ದು, ಅಂಕಗಳ ಆಧಾರದ ಮೇಲೆಯೇ ಸಿಬಿಎಸ್ಇ ಮಾದರಿಯಲ್ಲಿ ಎಸ್. ಎಸ್. ಎಲ್. ಸಿ ಹಾಗೂ ಪ್ರಥಮ ಪಿ.ಯು.ಸಿ. ಅಂಕ ಆಧರಿಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು https://dpue-exam.karnataka.gov.in/iipu2021 ಈ ಲಿಂಕ್ ಬಳಸಿ ಫಲಿತಾಂಶ ಪಡೆಯಬಹುದು. ಈ ಲಿಂಕ್ನಲ್ಲಿ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಜಿಲ್ಲೆ, ಕಾಲೇಜಿನ ಹೆಸರು, ವಿದ್ಯಾರ್ಥಿ ಹೆಸರು, ನೋಂದಣಿ ಸಂಖ್ಯೆ, ತಂದೆ – ತಾಯಿಯ ಹೆಸರು, ವಿದ್ಯಾರ್ಥಿ ರಿಜಿಸ್ಟರ್ ಸಂಖ್ಯೆಯನ್ನು ಲಿಂಕ್ ನಲ್ಲಿ ನಮೂದಿಸಬೇಕಾಗುತ್ತದೆ.