ಉಡುಪಿ (ಜು, 20) : ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಹಾಲಿನ ಪ್ಯಾಕೆಟ್ ಗಳನ್ನು ಬಳಸಿ ಮನೆಯ ಸುತ್ತಮುತ್ತಲೂ ಸುಂದರ ಕೈದೋಟ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದ ಉಡುಪಿಯ ಯತೀಶ್ ಕಿದಿಯೂರು ಮನೆಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಕುಟಂಬದೊಂದಿಗೆ ಭೇಟಿ ನೀಡಿದರು. ಸಹೋದ್ಯೋಗಿ ಯತೀಶ್ ಕಿದಿಯೂರು ರವರ ಪರಿಸರ ಪ್ರೇಮ ಮತ್ತು ಸ್ರಜನಶಿಲತೆಗೆ ಜಿಲ್ಲಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯತೀಶ್ ಕಿದಿಯೂರು ಬಿಡುವಿನ ಸಮಯದಲ್ಲಿ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್ ಗಳನ್ನು ಹಾಗೂ ಹಾಲಿನ ಪ್ಯಾಕೆಟ್ ಗಳನ್ನು ಸಂಗ್ರಹಿಸಿ ಅದರಲ್ಲಿ ವಿವಿಧ ಬಗೆಯ ಅಲಂಕಾರಿಕ ಸಸ್ಯಗಳನ್ನು ನೆಟ್ಟು ಮನೆಯ ಪರಿಸರವನ್ನು ಹಚ್ಚ ಹಸಿರಾಗಿಸಿದ್ದಾರೆ. ಸುಮಾರು 400 ಕ್ಕೂ ಮಿಕ್ಕಿ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್ ಹಾಗೂ ಹಾಲಿನ ಪ್ಯಾಕೆಟ್ ಗಳನ್ನು ಬಳಸಿ ನಿರ್ಮಿಸಿದ ಕೈದೋಟದ ನಿರ್ವಹಣೆ ಮಾಡಲು ಯತೀಶ್ ರವರಿಗೆ ಪತ್ನಿ ಅಶ್ವಿತಾ ಹಾಗೂ ಮಗಳು ಸಹಕಾರ ನೀಡುತ್ತಿದ್ದಾರೆ.













