ಹೆಮ್ಮಾಡಿ (ಜು, 25): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟದ ಸಂಘದ ಸದಸ್ಯರಿಗೆ ರೂ,9 ಲಕ್ಷಕ್ಕೂ ಹೆಚ್ಚಿನ ಲಾಭಾಂಶದ ಮೊತ್ತವನ್ನು ವಿತರಣೆ ಮಾಡಲಾಯಿತು.
ಮೆಕ್ಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಲಾಭಾಂಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಎಂ ಜೆ. ಬೇಬಿರವರು ವಹಿಸಿದ್ದರು. ಯೋಜನೆಯ ತಾಲೂಕು ಲೆಕ್ಕಪರಿಶೋಧಕರಾದ ರಾಘವೇಂದ್ರರವರು ಸದಸ್ಯರಿಗೆ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್ ಹಾಗೂ ಕೊಲ್ಲೂರು ವಲಯದ ಜನಜಾಗೃತಿ ಸದಸ್ಯರಾದ ಮಹಾಬಲ ಪೂಜಾರಿಯವರು ಭಾಗ್ಯ ಸಂಘದ ಸದಸ್ಯರಿಗೆ ಸಾಂಕೇತಿಕವಾಗಿ ಲಾಭಂಶವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು. ಒಕ್ಕೂಟದ ಮೂವತ್ತಕ್ಕೂ ಹೆಚ್ಚು ಸದಸ್ಯರು ಸಭೆಯಲ್ಲಿ ಸಾಕ್ಷಿಯಾದರು.
ಮಹಾಬಲ ಪೂಜಾರಿಯವರು ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾ ವಂದಿಸಿದರು.