ಕುಂದಾಪುರ (ಆ, 06) : ಕುಂದಾಪುರದ ಫ್ಲೋರಾ ಎಂಡ್ ಫೌನಾ ಕ್ಲಬ್ನ ಅಧ್ಯಕ್ಷರಾಗಿರುವ ರೋಟೆರಿಯನ್ ಡಾ. ಹೆಚ್. ಎಸ್. ಮಲ್ಲಿ ಯವರ ಪಕ್ಷಿಗಳ ಕುರಿತಾಗಿ ರಚಿಸಿದ ಕೃತಿ ಹಾರ್ಬಿನ್ಜೆರ್ ಆಫ್ ಡಿಲೈಟ್ ನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಅಧ್ಯಕ್ಷರಾದ ಎ. ಶಶಿಧರ ಹೆಗ್ಡೆ ಅವರು ಆಗಸ್ಟ್, 5ರಂದು ಡಾ. ಹೆಚ್. ಎಸ್. ಮಲ್ಲಿ ಯವರ ಚಿಕಿತ್ಸಾಲಯದಲ್ಲಿ ಬಿಡುಗಡೆಗೊಳಿಸಿ ಡಾ. ಹೆಚ್.ಎಸ್. ಮಲ್ಲಿಯವರು ಪಕ್ಷಿ ಪ್ರೇಮ ಹಾಗೂ ಅಧ್ಯಯನ ಆಸಕ್ತಿಯನ್ನು ಶ್ಲಾಘಿಸಿದರು.
ಗ್ರಾಮೀಣ ಭಾಗದ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಕುರಿತಾದ ಅಧ್ಯಯನ ಆಸಕ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಲೇಖನ ಬರೆದಿದ್ದೇನೆ ಎಂದು ಲೇಖಕ ಡಾ. ಹೆಚ್. ಎಸ್. ಮಲ್ಲಿ ಹೇಳಿದರು. ಕುಂದಾಪುರದ ಫ್ಲೋರಾ ಎಂಡ್ ಫೌನಾ ಕ್ಲಬ್ನ ಕಾರ್ಯದರ್ಶಿ ಎನ್. ಮೋಹನ ಆಚಾರ್ಯ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಕುಮಾರ್ ಕಾಂಚನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷ ಗಣೇಶ್ ಐತಾಳ್ ಸ್ವಾಗತಿಸಿದರು. ಪತ್ರಕರ್ತ ಸಂತೋಷ ಕೋಣಿ ವಂದಿಸಿದರು.