ಕುಂದಾಪುರ (ಆ, 10) : ಅಭಿನವ ಕಲಾತಂಡ ಕುಂದಾಪುರ ಇವರ ಕಲಾತ್ಮಕ ಕಿರುಚಿತ್ರ “ಕರ್ಕಾಟಿ ಅಮಾಸಿ” ಬಿಡುಗಡೆ ಸಮಾರಂಭ, ಅಭಿನವ ಪ್ರಶ್ನಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಯನ್ನು ಶ್ರೀ ಕಾರ್ತಿಕೇಯ ಕೃಪಾ ಸಭಾಭವನ ಕುಂದಾಪುರ ಇಲ್ಲಿ ಆಗಸ್ಟ್ ,8 ರಂದು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ ರಾಮಚಂದ್ರ ಉಡುಪ ಕುಂದಾಪುರ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸುವುದರ ಜೊತೆಗೆ “ಕರ್ಕಾಟಿ ಅಮಾಸಿ” ಕಲಾತ್ಮಕ ಕಿರುಚಿತ್ರ ಬಿಡುಗಡೆ ಗೊಳಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ನ ಪೂರ್ವಧ್ಯಕ್ಷರಾದ ಶ್ರೀ ಎ ಎಸ್ ಏನ್ ಹೆಬ್ಬಾರ್, ಇದೊಂದು ಅಭೂತ ಪೂರ್ವ ಕಿರುಚಿತ್ರ, ಇದನ್ನು ನೋಡಿದಷ್ಟು ಇನ್ನೊಮ್ಮೆ ನೋಡಬೇಕಿನಿಸುವಷ್ಟು ಸಂದೇಶದ ಹಂದರವಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಅಭಿನವ ಕಲಾ ತಂಡದ ಯೂಟ್ಯೂಬ್ ಚಾನೆಲ್ ನಲ್ಲಿ ಎಲ್ಲರೂ ನೋಡಿ ಹರಸಿ ಹಾರೈಸಿ, ಹಂಚಿ ಎಂದು ಸಂತಸದ ಮಾತನಾಡಿದರು.
ಹಾಗೆಯೇ ಅಭಿನವ ಕಲಾತಂಡದವರ ರತ್ನ ಶಾಮಿಯಾನ ನಾಟಕದ ಕುರಿತಾಗಿ ಮಾತನಾಡಿದ ಅವರು ಕರೋನಾ ಕಾರಣದಿಂದ ಪ್ರದರ್ಶನದಿಂದ ವಂಚಿತರಾದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹಲವಾರು ಹಾಸ್ಯ ಚಿತ್ರಗಳು, ಕಿರುಚಿತ್ರ, ಹಾಗೂ ತಮ್ಮ ತಂಡದ ಕಲಾವಿದರು ಮಾತ್ರವಲ್ಲದೆ ಬೇರೆ ತಂಡಗಳ ಕಲಾವಿದರನ್ನು ಕೂಡಿಕೊಂಡು ಕಲಾತ್ಮಕ ಕಿರುಚಿತ್ರಗಳನ್ನು ಮಾಡಿ ಜನ ಮನ್ನಣೆಗೆ ಪತ್ರವಾಗಿದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥರಾದ ಶ್ರೀ ನಾಗರಾಜ್ ವಿಠ್ಠಲವಾಡಿ ಮತ್ತು ಶ್ರೀ ಗುರು ಕುಂದಾಪುರ್ ವೇದಿಕೆಯಲ್ಲಿದ್ದು, ನಾಗರಾಜ್ ವಿಠ್ಠಲವಾಡಿ ಸಂಸ್ಥೆಯ ವರದಿ ವಾಚಿಸಿದರು. ಗುರು ಕುಂದಾಪುರ್ ರವರು ಇಡೀ ಕಿರುಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.ಅಭಿನವ ಕಲಾತಂಡದ ಹಿರಿಯ ಕಲಾವಿದರಾದ ಶ್ರೀ ಶ್ರೀನಿವಾಸ್ ಪೈ ಮಾತನಾಡಿ ಮುಂದಿನ ದಿನಗಳಲ್ಲಿ ನೂತನ ಕಥಾ ಹಂದರದೊಂದಿಗೆ ಅಭಿನವ ತಂಡ ನಿಮ್ಮ ಮುಂದೆ ಬರಲಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಅಭಿನವ ಪ್ರಶ್ನಾವಳಿಯ ವಿಜೇತರಾದ ಸಂಸ್ಥೆಯ ಕಲಾವಿದರಾದ ಶ್ರೀ ಸತೀಶ್ ಪೂಜಾರಿ ಮಾವಿನಕಟ್ಟೆ ಯವರನ್ನು ಗುರುತಿಸಿ ಗೌರವಿಸಲಾಯಿತು. ಹಾಗೆಯೇ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಗುರುತಿಸಿ ಅಭಿನಂದನಾ ಪಾತ್ರ ನೀಡಲಾಯಿತು. ಭೂಮಿಕಾ ಉಡುಪರ ಪ್ರಾರ್ಥನೆಗೈದರು, ಸಂಸ್ಥೆಯ ಕಲಾವಿದೆ ಕು. ಚೈತ್ರ ಸ್ವಾಗತಿಸಿದರು. ಸಂಸ್ಥೆಯ ಕಲಾವಿದರದ ಶ್ರೀ ಮಂಜುನಾಥ್ ನೆಂಪು ಧನ್ಯವಾದಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.