ತ್ರಾಸಿ (ಆ, 16) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾ ಆವರಣದಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಗ್ಲೋಬ್ ಇಂಟರ್ಲಾಕ್ಸ್ ನಾಡಾದ ಮಾಲೀಕರು ಮತ್ತು ಪೋಷಕರಾದ ಸಂತೋಷ ಡಿ’ಸೋಜಾ
ಧ್ವಜಾರೋಹಣ ಗೈದರು. ಧ್ವಜಾರೋಹಣ ಸಮಾರಂಭದಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಕೋವಿಡ್ ಸಂತ್ರಸ್ತರು ಮತ್ತು ಯೋಧರನ್ನು ಸ್ಮರಿಸಲಾಯಿತು.
ಸ್ವಾತಂತ್ರ್ಯ ದಿನದ ಸಂದೇಶಗಳನ್ನು ಹಿಂದಿ, ಕನ್ನಡ ಮತ್ತು ಇಂಗ್ಲೀಷ್ 3 ಭಾಷೆಗಳಲ್ಲಿ ಕ್ರಮವಾಗಿ ಕರೋಲ್, ಧೃತಿ ಮತ್ತು ಅಶ್ವಿನ್ ವಾಚಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಮ್ಯಾಕ್ಸಿಮ್ ಡಿ’ಸೋಜಾ ರವರು ತಮ್ಮ ಸಂದೇಶದಲ್ಲಿ, ಇಂದು ನಾವು ಗುಲಾಮಗಿರಿಯ ಹೊಸ ರೂಪದಿಂದ ಒತ್ತೆಯಾಳುಗಳಾಗಿದ್ದೇವೆ, ಅಂದರೆ, ಕರೋನಾ ವೈರಸ್. ಈ ಸಣ್ಣ ಮತ್ತು ಕಾಣದ ವೈರಸ್ ನಮ್ಮ ಜೀವನವನ್ನು ಅಸ್ಥವ್ಯಸ್ಥ ಮಾಡಿದಲ್ಲದೇ ಬಂದುಕು ಮತ್ತು ಬಾಂಬುಗಳಿಗಿಂತ ಕರೋನಾ ನಮ್ಮನ್ನು ಹೆಚ್ಚು ಭಯಭೀತರನ್ನಾಗಿಸಿದೆ.
ನಾವಿಂದು ಕರೋನಾ ವೈರಸ್ ವಿರುದ್ಧ ಹೋರಾಡಬೇಕಾಗಿದೆ. ಹಾಗೆಯೇ ದೇಶಕ್ಕಾಗಿ ತಮ್ಮಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕ ಸಮುದಾಯದ ದೇಶಭಕ್ತಿಯ ಉತ್ಸಾಹವನ್ನು ಹೆಚ್ಚಿಸಲು ಶಾಲಾ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
2020-21ರ ಶೈಕ್ಷಣಿಕ ವರ್ಷದಲ್ಲಿ ಲೀಡ್ ಶಾಲೆಯಿಂದ ಆಯೋಜಿಸಲಾದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ 3 ನೇ ತರಗತಿಯ ಮಾಸ್ಟರ್ ಇತನ್ ಡಿ’ಮೆಲ್ಲೋ ,6 ನೇ ತರಗತಿಯ ನೋಹನ್ ಮೆಂಡೋನ್ಸಾ ಹಾಗೂ ರಿಯೋನ್ ಮೆಂಡೋನ್ಸಾ ರವರಿಗೆ ‘Creator Level Title’ ಸಾಧಿಸಿದ್ದಕ್ಕಾಗಿ ಗೌರವಿಸಲಾಯಿತು. ಅಂತರಾಷ್ಟ್ರೀಯ ಯೋಗ ಕ್ರೀಡಾಪಟು, 8 ನೇ ತರಗತಿಯ ಧನ್ವಿ ಪೂಜಾರಿ ಯವರನ್ನು ಯೋಗದಲ್ಲಿ ರಾಜ್ಯ ಮಟ್ಟದ ಸಾಧನೆಯ ಜೊತೆಗ ಕರ್ನಾಟಕ ಸಾಧಕರ ಪುಸ್ತಕದಲ್ಲಿ ಹೆಸರನ್ನು ಪಡೆದಿದ್ದಕ್ಕಾಗಿ ಶಾಲೆಯಿಂದ ಗೌರವಿಸಲಾಯಿತು .
ಕಾರ್ಯಕ್ರಮಕ್ಕೆ ಕುಂದಾಪುರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಭಾಗ್ಯಲಕ್ಷ್ಮಿಯವರು ಇಂದು ನಾವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೂ, ಕರೋನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನಾವು ನಮ್ಮ ಹೃದಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸ ಬೇಕಾಗಿದೆ. ಕರೋನಾ 3 ನೇ ಅಲೆ ತಡೆಯಲು ಪೋಷಕರು ಕುಟುಂಬಗಳನ್ನು ಜಾಗ್ರತೆಯಿಂದ ನೋಡಿಕೊಳ್ಳುವಂತೆ ಮತ್ತು ಮಕ್ಕಳನ್ನು ಅನಗತ್ಯವಾಗಿ ವೈರಸ್ಗೆ ಒಡ್ಡದಂತೆ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಸ್ವಾತಂತ್ರ್ಯೋತ್ಸವದ ವಿವಿಧ ಸಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ ಮಾಡಲಾಯಿತು.