ಕುಂದಾಪುರ(ಆ,15): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ 75 ರ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಕೋಟೇಶ್ವರದ ಅಂಶೂ ಐಕಾನ್ ಅಪಾರ್ಟ್ಮೆಂಟ್ ನಲ್ಲಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ.ಕಂದಾವರ ಜಯಶೀಲ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಮಹನೀಯರಾದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ. ಎಚ್. ಪ್ರಭಾಕರ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಗೋವಿಂದ ಶೆಟ್ಟಿ, ಶ್ರೀ ಸದಾನಂದ ಶೆಟ್ಟಿ, ಹಾಗೂ ಶ್ರೀ ಪಾಂಡುರಂಗ ಶಣೈ ಯವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ವಲಯಾಧ್ಯಕ್ಷರಾದ ಲ.ಅಶೋಕ್ ಶೆಟ್ಟಿ ಸಂಸಾಡಿ ಶುಭ ಹಾರೈಸಿದರು. ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು, ಪ್ರಧಾನ ಕಾರ್ಯದರ್ಶಿ ಲ. ಗಿರೀಶ್ ಮೇಸ್ತ ಸರ್ವರನ್ನೂ ಸ್ವಾಗತಿಸಿದರು.ಲ. ಅಣ್ಣಪ್ಪ ಶೆಟ್ಟಿ ಯರುಕೋಣೆ ಧನ್ಯವಾದ ಅರ್ಪಿಸಿ, ಲ. ಅಂಪಾರು ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.