ವಂಡ್ಸೆ (ಆ,24): ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಆಗಸ್ಟ್,24 ರಂದು ಕನ್ನಡ ಚಿತ್ರರಂಗದ ಹೆಸರಾಂತ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಪ್ರದೀಪ್ ಶೆಟ್ಟಿ ಬೆಳ್ಳಾಲ ,ದಿವ್ಯಾಧರ್ ಶೆಟ್ಟಿ ಕೆರಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕೆರಾಡಿಯಿಂದ ನಾಲೈದು ಕಿಲೋಮೀಟರ್ ಕಾಡು ದಾರಿಯಲ್ಲಿ ಸಾಗಿದರೆ ಅತ್ಯoತ ಎತ್ತರದ ಸ್ಥಳದಲ್ಲಿ ಉರ್ಧ್ವಮುಖಿಯಾಗಿ ಮೂಡುಗಲ್ಲು ಗುಹೆಯ ಒಳಗೆ ಹರಿಯುವ ನೀರಿನ ನಡುವೆ ಕೇಶವನಾಥೇಶ್ವರ ಲಿಂಗ ಪ್ರತಿಷ್ಠಾಪಿಸಲ್ಪಟ್ಟಿರುವುದು ಈ ಕ್ಷೇತ್ರದ ವಿಶೇಷ.