ಕುಂದಾಪುರ(ಸೆ,15): ಇಲ್ಲಿನ ಕಲಾಮಂದಿರದಲ್ಲಿ ರೋಟರಿ ಕುಂದಾಪುರ, ತಾಲೂಕು ಆರೋಗ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು.
ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಸುಮಾರು 500 ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಯಿತು. ಸಮಾರಂಭವನ್ನು ಸಹಾಯಕ ಆಯುಕ್ತರಾದ ಶ್ರೀ ರಾಜು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜೇಶ್ವರಿ, ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಾಬರ್ಟ್, ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪೀಡಿಯಾಟ್ರಿಕ್ ವಿಭಾಗದ ವೈದ್ಯಕೀಯ ತಂಡ , ರೋಟರಿ ಕುಂದಾಪುರದ ಅಧ್ಯಕ್ಷ ರೊ. ಶಶಿಧರ ಹೆಗ್ಡೆ ಹಾಗೂ ಕಾರ್ಯದರ್ಶಿ ರೊ. ಕುಮಾರ್. ಎಸ್. ಕಾಂಚನ್ ಭಾಗವಹಿಸಿದರು .
ಮಾಜಿ ಅಸಿಸ್ಟೆಂಟ್ ಗವರ್ನರ್ ರೊ. ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ,ಮಾಜಿ ಅಧ್ಯಕ್ಷರಾದ ರೊ. ಗಣೇಶ ಐತಾಳ್ , ಹಿರಿಯ ಸದಸ್ಯರಾದ ರೊ. ಮುತ್ತಯ್ಯ ಶೆಟ್ಟಿ, ರೊ. ರಾಘವೇಂದ್ರ ಗೋಪಾಡಿ, ನಿಯೋಜಿತ ಅದ್ಯಕ್ಷ ರೊ. ವೆಂಕಟೇಶ್,ರೊ. ವರದರಾಜ ಕಾರ್ವಿ ರೊ. ಪ್ರಕಾಶ್ ಹೆಗ್ಡೆ,ರೊ. ಸತೀಶ್ ಕೊತ್ವಾಲ್ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಬೇಕಾಗುವಂತಹ ಸಂಪೂರ್ಣ ಔಷದೋಪಚಾರ ಹಾಗೂ ಊಟೋಪಚಾರದ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿಯನ್ನು ರೋಟರಿ ಕುಂದಾಪುರ ಸಂಸ್ಥೆ ಬರಿಸಿರುತ್ತದೆ.