ಅಂಪಾರು (ಅ,14): ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಮನೆ ಹಾನಿಯಾದ 63 ಕುಟುಂಬಗಳಿಗೆ ಬೈಂದೂರು ಶಾಸಕ ಶ್ರೀ ಬಿ.ಎಮ್ .ಸುಕುಮಾರ್ ಶೆಟ್ಟಿ ಯವರು ಪರಿಹಾರದ ಚೆಕ್ ವಿತರಿಸಿದರು.
25 ℅ ಮನೆ ಹಾನಿಯಾದ ವರಿಗೆ ಐವತ್ತು ಸಾವಿರ ರೂ, 50 ℅ ಮನೆ ಹಾನಿ ಯಾದವರಿಗೆ 3ಲಕ್ಷ ರೂ ಹಾಗೂ ಸಂಪೂರ್ಣ ಮನೆ ಹಾನಿ ಯಾದವರಿಗೆ 5 ಲಕ್ಷ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.ಕ್ರಷಿ ತೋಟ ಹಾನಿಯಾದ ವರೆಗೂ ಆದಷ್ಟು ಬೇಗ ಪರಿಹಾರ ನೀಡುವ ಭರವಸೆಯನ್ನು ಶಾಸಕರು ನೀಡಿದರು .ಈ ಸಂದರ್ಭದಲ್ಲಿ ಪಂಚಾಯಿತಿಯಿಂದ ತುರ್ತು ಪರಿಹಾರದ ಚೆಕ್ ವಿತರಿಸಲಾಯಿತು. ಪರಿಹಾರದ ಚೆಕ್ ತುರ್ತಾಗಿ ವಿತರಿಸುವಲ್ಲಿ ಮುತುವರ್ಜಿ ವಹಿಸಿದ ಶಾಸಕರು, ಸಂಸದರು, ಸಚಿವರಿಗೆ ಧನ್ಯವಾದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರದ ತಹಶಿಲ್ದಾರರು, ಕಂದಾಯಾಧಿಕಾರಿ, ಗ್ರಾಮಕರಣಿಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಂಕರನಾರಾಯಣ ಠಾಣಾಧಿಕಾರಿ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.