ಬಂಟಕಲ್(ಅ,27): ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2021-2 2ರ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವರೆಡ್ ಕ್ರಾಸ್ ಘಟಕ ಹಾಗೂ ರೋಟರಾಕ್ಟ್ ಘಟಕದ ಪದಪ್ರದಾನ ಸಮಾರಂಭವು ಅಕ್ಟೋಬರ್ 21ರಂದು ಕಾಲೇಜಿನಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಶಿಕ್ಷಣ ಮಾತ್ರವಲ್ಲದೆ ಹೊರಗಿನ ಜೀವನದ ಬಗ್ಗೆ ಶಿಸ್ತು, ಸೇವಾ ಮನೋಭಾವ, ನಾಯಕತ್ವ, ಸಹಬಾಳ್ವೆ ಮುಂತಾದ ಗುಣಗಳನ್ನು ಬೆಳಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಶಂಕರಪುರ ರೋಟರ್ಯಾಕ್ಟ್ ಘಟಕದ ಅಧ್ಯಕ್ಷರಾದ ರೋ. ಫ್ಲಾವಿಯಾ ಮೆನೆಜಸ್ ರೋಟರ್ಯಾಕ್ಟ ಕ್ಲಬ್ನ ಮಹತ್ವದ ಬಗ್ಗೆ ತಿಳಿಸಿದರು.ಶಂಕರಪುರ ರೋಟರ್ಯಾಕ್ಟ್ ಘಟಕದ ಸಂಯೋಜಕರಾದ ಎಡ್ವರ್ಡ್ ಮೆಂಡೋನ್ಸಾ ಪ್ರಮಾಣ ವಚನ ಸ್ವೀಕರಿಸುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು, ಆ ಗುರಿ ಸಾಧಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಮತ್ತು ನೂತನ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ವಿವಿಧ ವಿಭಾಗದ ಮುಖ್ಯಸ್ಥರು, ಆಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶೈಕ್ಷಣಿಕ ವರ್ಷ 2021-22ರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಧ್ಯಕ್ಷರಾಗಿ ಆನಿಂದಿತಾ, ಕಾರ್ಯದರ್ಶಿಯಾಗಿ ಭೂಮಿಕಾ ಜೆ.ಎಸ್ ಮತ್ತು ರೋಟರ್ಯಾಕ್ಟ್ ಘಟಕದ ಅಧ್ಯಕ್ಷರಾಗಿ ಶ್ರೀವತ್ಸ, ಕಾರ್ಯದರ್ಶಿಯಾಗಿ ಅನಿಕೇತ್ ಶೆಣೈ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವರೆಡ್ ಕ್ರಾಸ್ ಘಟಕ ಹಾಗೂ ರೋಟರ್ಯಾಕ್ಟ್ ಘಟಕದ ಸಂಯೋಜಕರಾದ ಶ್ರೀ ನಾಗರಾಜ್ ರಾವ್ 2020-21 ನೇ ಸಾಲಿನ ಘಟಕದ ವರದಿಯನ್ನು ಓದಿದರು.ಜೆಲೆನಾ ಸ್ವಾಗತಿಸಿದರು.ಅನನ್ಯ ಮತ್ತು ಚೈತ್ರಾ ಬಿ ಆರ್ ಅತಿಥಿಗಳನ್ನು ಪರಿಚಯಿಸಿದರು. ಸಾಯಿನಾಥ ಶೆಟ್ಟಿ ವಂದನಾರ್ಪಣೆ ಮಾಡಿದರು. ಅಕ್ಷತಾ ರೆಂಜಾಲ್ ಮತ್ತು ಅವಂತಿ ರಾವ್ ನಿರೂಪಿಸಿದರು.