ಕುಂದಾಪುರ (ಅ,29): ಕುಂದಾಪುರದ ತಲ್ಲೂರಿನ ನಾರಾಯಣ ಶಾಲೆಯ ವಿಶೇಷ ವಚೇತನ ಮಕ್ಕಳಿಗಾಗಿ ಡೆಂಟಲ್ ಕಿಟ್ ಹಸ್ತಾಂತರ ಮತ್ತು ಡೆಂಟಲ್ ಹೆಲ್ತ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಅ,27 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿ ರೋಟೆರಿಯನ್ ಡಾ| ರಾಜರಾಮ್ ಶೆಟ್ಟಿಯವರು ಹಲ್ಲಿನ ಆರೋಗ್ಯದ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದರು.ಶಾಲೆಯ ಮ್ಯಾನೆಂಜಿಂಗ್ ಟ್ರಸ್ಟಿ ಶ್ರೀ ಸುರೇಶ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಶಶಿಧರ ಹೆಗ್ಡೆ, ಕಾರ್ಯದರ್ಶಿ ರೋಟೆರಿಯನ್ ಕೆ. ಎಸ್ .ಕಾಂಚನ್ ಮತ್ತು ರೋಟೆರಿಯನ್ ಕಸ್ಟಮ್ ಅಧಿಕಾರಿ ಶ್ರೀ ಪ್ರಭಾತ್ ಶೆಟ್ಟಿ ಉಪಸ್ಥಿತರಿದ್ದರು.