ಕವಿಸಂಚಾರ ಹೊರಟಿದೆ ಕಾಣದೂರಿಗೆ ನೆನಪ ಮೈಲಿಗಲ್ಲುಗಳ ಜೊತೆಗೆ; ಹರ್ಷೊಲ್ಲಾಸದ ಗಡಿ ಹುಡುಕಿ ನಡಿಗೆ… ನಡೆದಷ್ಟೂ ನಡೆಸುವ ಪಥಕೆ ಹೆಜ್ಜೆಗಳು ಮುನ್ನುಡಿ ಬರೆದಿವೆ,, ಗೀಚಿದಷ್ಟೂ ಜಿನುಗುವ ಭವಕೆಪುಟಗಳು ಸೋಲನೊಪ್ಪಿ ತಿರುಗಿವೆ ..ಅಕ್ಷರವೆಲ್ಲಾ ಮಾಸಿ ಮರೆಯಾಗಿವೆ..!!
ದಿಗಂತ ಕಡಲಿನ ನಡುವಿನಲ್ಲಿ ಅನಂತತೆಯ ಹಾಯಿದೋಣಿ…. ಸಾಗುತಿದೆ ನಿರ್ದಿಗಂತವಾಗಿ ಏರಿ ಕವಿಕಲ್ಪನೆಗಳನ್ನ ಅಲ್ಪತೆಗೆ ತೂರಿ!! ಅಲ್ಪಾನಂತತೆಯ ಕದನದಲಿ ಸಕಲತೆಯ ಕಿಡಿ ಉದ್ಭವಿಸಿಧಗಿಸಿತೇ ಧರೆಹೊತ್ತಿ ಜ್ವಾಲೆಯಲಿ?? ಸುಪ್ತ ಮನಸಿನ ಮಿತಿಮೀರಿ…..!!
ಸವಿದಷ್ಟೂ ಸವೆಯುತಿದೆ ಜೀವನ ತುಂಬಿದಷ್ಟೂ ಬತ್ತುತಿದೆ ಖುಷಿಯ ಒರತೆ ತಿಳಿಯುವನು ಒಮ್ಮೊಮ್ಮೆ ಶೂನ್ಯಸಾರ’ ಆಸೆಗೊಂದು ಮಿತಿಯಿದೆ ಬದುಕಿನಾಚೆ ಸಾವಿದೆ….. ‘ಅದತಿಳಿಯದ ತೀಕ್ಷ್ಣಮತಿಗೆತೀರಿಸದಷ್ಟು ಬಯಕೆಯಿದೆ..!
ಮುಗಿಯದ ಸಂಚಾರಕ್ಕೆ ಮಂಗಳವಿಟ್ಟು ಉಸುರುವನು ತನ್ನೊಳಗೆ ವ್ಯಥೆಯಲಿ” ನಿನ್ನೊಳಗಿನ ಖುಷಿಯನು ಇನ್ನೆಲ್ಲೊ ಹುಡುಕುತಾ ತಿರುಗಿದೆ ವಿಳಾಸವಿಲ್ಲದೇ….. ಸಿಗದು ಪ್ರತಿಫಲ ಅದು ಬರಿದೇ!”
ಗಣೇಶ್ ಭಟ್ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಸ.ವಿ.ಪದವಿಪೂರ್ವ ಕಾಲೇಜು ಗಂಗೊಳ್ಳಿ