ಉಡುಪಿ (ನ,28); ಉಡುಪಿಯ ಪ್ರತಿಷ್ಠಿತ ಸಂಸ್ಥೆಯಾದ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿವರ್ಷ ಮಹಾಸಭೆಯ ದಿನ ಸಮಾಜ ಸೇವಕರನ್ನು ಗುರುತಿಸಿ ಅರ್ಹ ವ್ಯಕ್ತಿಗಳಿಗೆ ನೀಡುವ ಸೇವಾ ರತ್ನ ಪ್ರಶಸ್ತಿಯನ್ನು ಈ ವರುಷ ಮುಳುಗು ತಜ್ಞ ,ಜೀವರಕ್ಷಕ ,ಆಪದ್ಬಾಂಧವ ಈಶ್ವರ್ ಮಲ್ಪೆ ಬಲರಾಮನಗರ ಇವರಿಗೆ 2021 ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ .
ಈಶ್ವರ್ ಮಲ್ಪೆಯವರು ಹಗಲು ರಾತ್ರಿ ಯನ್ನದೇ 24 ಗಂಟೆ ಜನಸೇವೆಯಲ್ಲಿದ್ದು, ಇಲ್ಲಿಯತನಕ ಸರಿಸುಮಾರು 235 ಮೃತ ದೇಹಗಳನ್ನು ಹರಿಯುವ ನದಿ ಮತ್ತು ಅಳದ ಸಮುದ್ರದಲ್ಲಿ ಹೂತಿರುವ ಹೆಣಗಳನ್ನು ಸಾಹಸ ಮರೆದು ಶೋಧಿಸಿ ವಾರಸುದಾರಾರಿಗೆ ಅರ್ಪಿಸುವಲ್ಲಿ ಇವರ ನಿಸ್ವಾರ್ಥ ಸೇವೆ ಗಣನೀಯವಾದದ್ದು.
ಈಶ್ವರ್ ಮಲ್ಪೆ ವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಧ್ಯಕ್ಷರಾದ ವಾಲ್ಟರ್ ಸಲ್ದಾನ, ಉಪಾಧ್ಯಕ್ಷರಾದ ದಿವಾಕರ್ ಸನಿಲ್, ಸಂಸ್ಥಾಪಕ ಅಧ್ಯಕ್ಷರಾದ ಡಾಲ್ಫಿ ವಿಕ್ಟರ್ ಲೂಯಿಸ್. ಕಾರ್ಯದರ್ಶಿ ಆನಂದ ಕಾರ್ನಾಡ್, ಕೋಶಾಧಿಕಾರಿ ಮ್ಯಾಕ್ಸಿನ್ ಸಾಲ್ದಾನ,ಸಂಸ್ಥೆಯ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಗೌರವಪೂರ್ಣವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವರದಿ :-ಈಶ್ವರ್ ಸಿ ನಾವುಂದ