ಕುಂದಾಪುರ (ಡಿ ,2): ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪಬಾರದು. ಜೀವನದ ನಿರ್ಣಾಯಕ ಘಟ್ಟದಲ್ಲಿ ಲೈಂಗಿಕ ಆಸಕ್ತಿಗಳು ಬದುಕನ್ನು ಪ್ರಪಾತಕ್ಕೆ ತಳ್ಳುವಂತಾಬಾರದು ಎಂದು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಕೌನ್ಸಿಲರ್ ಶ್ರೀಮತಿ ನಳಿನಾಕ್ಷಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯಂದು ಆಯೋಜಿಸಿದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಅರಿವು ಮೂಡಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಕೆ.ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಅಧ್ಯಕ್ಷೀಯ ನುಡಿಗಳನ್ನಾಡಿದರು.ಉಪನ್ಯಾಸಕ ಯೋಗಿಶ್ ಶ್ಯಾನುಭಾಗ್ ಸ್ವಾಗತಿಸಿದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥನೆಗೈದರು.ಉಪನ್ಯಾಸಕಿ ಮಾಲತಿ ಕುಂದರ್ ವಂದಿಸಿ, ಉಪನ್ಯಾಸಕ ಹರೀಶ್ ನಿರೂಪಿಸಿದರು .











