ಬೈಂದೂರು(ಡಿ.11); ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಯವರು ಬಹುಬಗೆಯ ಸಮಾಜಸೇವೆ ಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು , ಅದಕ್ಕೆ ಪೂರಕವಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ಅಂಬ್ಯುಲೆನ್ಸ್ ನ ಓರ್ವ ಚಾಲಕನಿಗೆ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡೀಸೆಲ್ ವೆಚ್ಚವನ್ನು ಭರಿಸಿಕೊಡುವುದರ ಮೂಲಕ ಮಾನವೀಯ ನೆಲೆಯ ಸೇವೆಗೆ ಸಹಾಯ ಹಸ್ತಚಾಚಿದ್ದಾರೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ ರವರ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಗೆ ಇತ್ತೀಚೆಗಷ್ಟೇ ಅಂಬ್ಯುಲೆನ್ಸ್ ನ ಸಮರ್ಪಕ ಸೇವೆಗೆ ಸಹಾಯ ಹಸ್ತದ ಮನವಿಸಲ್ಲಿಸಿದ್ದರು.
ಡಿಹೆಚ್ಓ ರವರ ಮನವಿಯನ್ನು ಸ್ವೀಕರಿಸಿ ಓರ್ವ ಚಾಲಕನ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡೀಸೆಲ್ ವೆಚ್ಚವನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಭರಿಸಲು ನಿರ್ಧರಿಸಿ ಒಪ್ಪಿಗೆ ಪತ್ರವನ್ನು ಡಿಹೆಚ್ಓ ರವರಿಗೆ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಹಸ್ತಾಂತರಿಸಿದರು.
ಅಗತ್ಯವಿದ್ದರೆ ಇನ್ನೋರ್ವ ಚಾಲಕನ ವೇತನ ನೀಡಲು ಟ್ರಸ್ಟ್ ಸಿದ್ಧವಿರುವುದಾಗಿಯೂ ತಿಳಿಸಿದರು.
ಡಾ. ಗೋವಿಂದ ಬಾಬು ಪೂಜಾರಿಯವರ ಈ ಮಾನವೀಯ ನೆಲೆಯ ಸೇವೆಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.